ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಇಲ್ಲಿತನಕ ಬರಲು ನಾನೇ ಕಾರಣ ಎಂದು ತ್ರಿವಿಕ್ರಮ್ ವರಸೆ ಬದಲಿಸಿದ್ದಾರೆ.
ಮೋಸ್ಟ್ ವಾಂಟೆಡ್ 6 ನಕ್ಸಲ್ ಶರಣಾಗತಿ ಆಗಲು ಕ್ಷಣಗಣನೆ: ಅದಕ್ಕೂ ಮುನ್ನ ನಾಯಕಿ ಹೇಳಿದ್ದೇನು!?
ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿದ್ದ ಭವ್ಯಾ ಮತ್ತು ತ್ರಿವಿಕ್ರಮ್ ದೂರ ದೂರ ಆಗಿದ್ದಾರೆ. ಭವ್ಯಾ ಹಾಗೂ ತ್ರಿವಿಕ್ರಮ್ ಮಧ್ಯೆ ಉತ್ತಮ ಒಡನಾಟ ಇತ್ತು. ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದರು. ಒಬ್ಬರ ನೆರಳು ಒಬ್ಬರ ಮೇಲೆ ಇತ್ತು. ಇತ್ತೀಚೆಗೆ ಕುಟುಂಬದವರು ಬಂದಾಗ ತ್ರಿವಿಕ್ರಮ್ಗೆ ಅವರ ತಾಯಿ ಬುದ್ಧಿ ಮಾತು ಹೇಳಿ ಹೋಗಿದ್ದರು. ಅಲ್ಲದೆ, ಸುದೀಪ್ ಕಡೆಯಿಂದಲೂ ಈ ವಿಚಾರವಾಗಿ ಸಾಕಷ್ಟು ಸಲಹೆ ನೀಡಿದ್ದರು. ಈಗ ತ್ರಿವಿಕ್ರಮ್ ಅವರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಭವ್ಯಾಗೆ ಏನೇ ವಿಚಾರ ಇದ್ದರೂ ನೇರವಾಗಿ ಹೇಳುವ ಕೆಲಸವನ್ನೂ ಮಾಡಿದ್ದಾರೆ. ಇದು ಭವ್ಯಾಗೆ ಬೇಸರ ಮೂಡಿಸಿದೆ. ಹಾಗಾದರೆ ಭವ್ಯಾ ಇಲ್ಲಿಯವರೆಗೆ ಬರೋಕೆ ತ್ರಿವಿಕ್ರಮ್ ಅವರು ಕಾರಣವಾ? ಹೀಗೊಂದು ಪ್ರಶ್ನೆ ಹುಟ್ಟುಹಾಕುವಂಥ ಮಾತು ಅವರ ಕಡೆಯಿಂದ ಬಂದಿದೆ. ನಿನ್ನೆಯ ಸಂಚಿಕೆಯಲ್ಲಿ ತ್ರಿವಿಕ್ರಮ್ ಹಾಗೂ ರಜತ್ ಅವರು ಕುಳಿತು ಮಾತನಾಡುತ್ತಿದ್ದರು. ಮನೆಗೆ ಬಂದು ಕಾಂಪಿಟೇಟರ್ನ ರೆಡಿ ಮಾಡಿ ನನಗೆ ಎದುರಾಳಿಯಾಗಿ ಬಿಟ್ಟುಕೊಂಡಂತೆ ಆಯಿತು ಎಂದರು ತ್ರಿವಿಕ್ರಮ್. ಅಂದರೆ, ಭವ್ಯಾನ ಒಳ್ಳೆಯ ಎದುರಾಳಿಯನ್ನಾಗಿ ಮಾಡಿ ಈಗ ಅವರ ಎದುರೇ ನಿಲ್ಲುವಂತೆ ಮಾಡಿಕೊಂಡಿದ್ದಾರೆ ಎಂಬರ್ಥದಲ್ಲಿ ತ್ರಿವಿಕ್ರಮ್ ಮಾತನಾಡಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.