ಬೆಂಗಳೂರು:- ಲವ್ ಮ್ಯಾರೇಜ್ ಆಗೋರು ಡಿವೋರ್ಸ್ ಪಡೆಯಬಾರದು ಅನ್ನೋ ಕಾನೂನು ಬರಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ನಾನು ಪ್ರೀತಿಸಿ ಮದುವೆಯಾಗಿ 54 ವರ್ಷ ಆಯ್ತು. ಇನ್ನು ಜೊತೆಯಾಗಿಯೇ ಇದ್ದೇವೆ. ಡಿವೋರ್ಸ್ ಆಗಿಲ್ಲ. ಇನ್ಮುಂದೆ ಡಿವೋರ್ಸ್ ಆಗೋ ಚಾನ್ಸ್ ಇಲ್ಲ ಎಂದು ನಕ್ಕರು. ಇದೇ ವೇಳೆ ಪ್ರೀತಿಸಿ ಮದುವೆ ಆಗೋರು ಎಂದಿಗೂ ಡೈವೋರ್ಸ್ ತೆಗೆದುಕೊಳ್ಳಬಾರದು ಎಂದು ಸಂತೋಷ್ ಹೆಗಡೆ ಸಲಹೆ ನೀಡಿದರು.
ಪ್ರೀತಿ ಅನ್ನೋದು ಹಿಟ್ ಆಂಡ್ ರನ್ ಆಗಬಾರದು. ಪ್ರೀತಿಸಿ ಮದುವೆಯಾದ್ಮೇಲೆ ಸಾಯೋವರೆಗೂ ಜೊತೆಯಾಗಿರಬೇಕು. ಪ್ರೀತಿಸಿ ಮದುವೆ ಆದವರು ಮುಂದೆ ವಿಚ್ಛೇಧನ ಕೇಳಬಾರದು ಎಂಬ ಒಂದು ಕಾನೂನು ಮಾಡಬೇಕು.
ಇದೇ ವೇಳೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಕಮಿಷನ್ ಆರೋಪಕ್ಕೆ ಸಂತೋಷ್ ಹೆಗಡೆ ಪ್ರತಿಕ್ರಿಯಿಸಿದರು. ಆವಾಗ 40 ಪರ್ಸೆಂಟ್ ಅಂತ ಹೇಳಿದ್ರು ಅಲ್ಲವಾ? ಇವಾಗ ಎಷ್ಟಿದೆ ಎಂಬುದನ್ನು ಕೇಳಿ ಎಂದು ಮಾಧ್ಯಮಗಳಿಗೆ ಹೇಳಿದರು.