ಜೀವನದಲ್ಲಿ ಯಶಸ್ಸು ಎಲ್ಲರಿಗೂ ಸಿಗಲ್ಲ.. ಆದರೆ ಆ ಯಶಸ್ಸಿನ ಮೆಟ್ಟಿಲೇರಿದ ವ್ಯಕ್ತಿಯ ಮದವೇರಬಾರದು.. ಅಂತದ್ದ ಮದ ಇಡೀ ಜೀವನವನ್ನೇ ಸರ್ವನಾಶಗೊಳಿಸಬಿಡುತ್ತೆ. ಅಂತ ಕಥೆಗೆ ನಿದರ್ಶನವೇ ಈ ಕ್ರಿಕೆಟಿಗ ಇಂದಿನ ಸ್ಥಿತಿ. ಅತಿ ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್ ತಾರೆಯಾಗಿ ಮಿಂಚಿದ ಈತ ಇಂದಿನ ಜೀವನ ಹೇಗಿದೆ ಗೊತ್ತಾ.. ಇದೆನ್ನೆಲ್ಲಾ ಹೇಳ್ತೀವಿ.. ಅದಕ್ಕೂ ಮುನ್ನ ನೀವಿನ್ನೂ ನಮ್ಮ ಐಎಎನ್ ಚಾನೆಲ್ ಸಬ್ ಸ್ಕೈಬ್ ಮಾಡಿಲ್ಲ ಅಂದರೆ ಈ ಕೂಡಲೇ ಸಬ್ ಸ್ಕೈಬ್ ಮಾಡಿ, ತಾಜಾ ಸುದ್ದಿಗಳ ಅಪ್ಡೇಟ್ ಪಡೆಯಿರಿ..
Mandya: ಕಾಂಗ್ರೆಸ್ ಸಮಾವೇಶಕ್ಕೆ ಪ್ರತಿಯಾಗಿ ನಡೆಯಬೇಕಿದ್ದ ಜೆಡಿಎಸ್ ಸಮಾವೇಶ ಮುಂದೂಡಿಕೆ!
ವಿನೋದ್ ಕಾಂಬ್ಲಿ.. ಒಂದು ಕಾಲದಲ್ಲಿ ಕ್ರಿಕೆಟ್ ಲೋಕದಲ್ಲಿ ಮಿಂಚಿದ ತಾರೆ.. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಆಪ್ತ ಸ್ನೇಹಿತ.. ಸಣ್ಣ ವಯಸ್ಸಿನಲ್ಲೇ ಹಲವು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದವರು. ವರ್ಡ್ಲ್ ಕಪ್ ನಲ್ಲೂ ಸಹ ಆಟವಾಡಿದಾತ.. ಆದರೆ ಆತನ ಇಂದಿನ ಸ್ಥಿತಿ ಮಾತ್ರ ನಿಜಕ್ಕೂ ಶೋಚನೀಯ.. ಹೌದು, ಕಳೆದೊಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ವಿನೋದ್ ಕಾಂಬ್ಲಿಯ ವಿಡಿಯೋವೊಂದು ವೈರಲ್ ಆಗ್ತಿದೆ..
ಇತ್ತೀಚಿಗೆ ಲೆಜೆಂಡರಿ ಕೋಚ್ ರಮಾಕಾಂತ್ ಅಚ್ರೇಕರ್ ರ ಸ್ಮಾರಕ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದರು. ಇದೇ ವೇಳೆ ವೇದಿಕೆಯಲ್ಲಿದ್ದ ವಿನೋದ್ ಕಾಂಬ್ಲಿ ಕಂಡೊಡನೆಯೇ ಅವರ ಬಳಿ ಓಡಿದ ಸಚಿನ್ ಅವರನ್ನು ಅತ್ಮೀಯತೆಯಿಂದ ಮಾತಾಡಿಸಿದರು. ವಿನೋದ್ ಸಹ ಸಚಿನ್ ಕಂಡೊಡನೆಯೇ ಭಾವುಕರಾಗಿ ಬಿಟ್ಟಿದರು. ಸಚಿನ್ ಕೈಯನ್ನು ಬಲವಾಗಿ ಹಿಡಿದು ಬಾವೋಧ್ವೇಗದಲ್ಲಿ ಮುಳುಗಿದ್ದರು. ಸಚಿನ್ ರತ್ತ ಅವರು ಬೀರಿದ ನೋಟದಲ್ಲಿ ನೋವಿತ್ತು ಅನ್ನೋದು ಮಾತ್ರ ಆ ವಿಡಿಯೋ ನೋಡಿದವರೆಲ್ಲರಿಗೂ ಗೊತ್ತಾಗುತ್ತೆ.
ವರ್ಡ್ ಕಪ್, ಓಡಿಐ, ಟೆಸ್ಟ್ ಮ್ಯಾಚ್ ಗಳಲ್ಲಿ ಸಾವಿರಾರು ರನ್ ಗಳ ಭಾರಿಸಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಕಾಂಬ್ಲೇ ಬದುಕೇ ಬದಲಾಗಿತ್ತು. ಒಗ್ಗದ ಚಟಗಳ ಮೈಗೂಡಿಸಿಕೊಂಡು ತಮ್ಮ ಜೀವನವನ್ನೇ ಸರ್ವನಾಶ ಮಾಡಿಕೊಂಡು ಬಿಟ್ಟರು ಕಾಂಬ್ಲಿ..
ಮುಂಬೈನ ಬಡಕುಟುಂಬದವರು ಕಾಂಬ್ಲಿ.. ತಂದೆ ಮೆಕ್ಯಾನಿಕ್.. ಕಾಂಬ್ಲಿ ಒಡಹುಟ್ಟಿದವರು ಏಳು ಮಂದಿ.. ಮನೆಯಲ್ಲಿ ಕಿತ್ತು ತಿನ್ನೋ ಬಡತನವಿದ್ದರೂ ಮಗನ ಕ್ರಿಕೆಟ್ ಪ್ರೀತಿಗೆ ನೀರೆರೆದರು ಅವರ ಹೆತ್ತವರು.. ಕ್ರಿಕೆಟ್ ಆಕಾಡೆಮಿಗೆ ಸೇರಿಸಿದರು. ಕಾಂಬ್ಲಿ ಕೂಡ ಅತ್ಯಂತ ಶ್ರದ್ಧೆಯಿಂದಲೇ ಎಲ್ಲವನ್ನೂ ಕಲಿತರು.. ಜೊತೆಗೆ ಕಿರಿಯ ವಯಸ್ಸಿನಲ್ಲೇ ಭಾರತ ತಂಡವನ್ನು ಸೇರಿದರು. ಮುಂಬೈನ ಶಾಲಾ ಪಂದ್ಯವೊಂದರಲ್ಲಿ ಸಚಿನ್ ಮತ್ತು ಕಾಂಬ್ಲಿ 664 ರನ್ ಗಳ ಕಲೆ ಹಾಕಿದ್ದರು.. ಅದರಲ್ಲಿ ಕಾಂಬ್ಲಿ ಪಡೆದ ರನ್ ಬರೋಬ್ಬರಿ 349 ಅಂದು ಅವರಿಬ್ಬರ ಆಟ ಕಂಡವರೆಲ್ಲಾ ಈ ಇಬ್ಬರು ಮುಂದೆ ಕ್ರಿಕೆಟ್ ಲೋಕವನ್ನೇ ಆಳುತ್ತಾರೆಂದು ಭವಿಷ್ಯ ನುಡಿದ್ದಿದ್ದರು. ಅದರಂತೆ ಕಾಂಬ್ಲಿ ಸಹ ಮುಂಬೈ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. 1991ರಲ್ಲಿ ಟೀಂ ಇಂಡಿಯಾದ ಆಟಗಾರರಾದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಟವಾಡಿದರು. ತಮ್ಮ ಮೊದಲ ಏಳು ಪಂದ್ಯಗಳಲ್ಲೇ ನಾಲ್ಕು ಶತಕ, ಎರಡು ದ್ವಿಶತಕ ಬಾರಿಸಿದ್ದರು. ಅಲ್ಲದೇ ಭಾರತದ ಪರವಾಗಿ ಕೇವಲ 14 ಟೆಸ್ಟ್ ಗಳಲ್ಲಿ 1000 ರನ್ ಗಳ ಕಲೆಹಾಕಿದವರು ವಿನೋದ್ ಕಾಂಬ್ಲಿ..
ಇಂಥ ಯಶಸ್ಸಿನ ಉತ್ತುಂಗದಲ್ಲಿದ್ದ ಕಾಂಬ್ಲಿ ಬದುಕು ಸಂಪೂರ್ಣ ಬದಲಾಗಿತ್ತು. ಅದಕ್ಕೆ ಕಾರಣ ಅವರ ದುಷ್ಟಟ, ಅಶಿಸ್ತು ಎಂದರೆ ತಪ್ಪಾಗಲಾರದು.. ಯಶಸ್ಸಿನ ಅಮಲು ಕಾಂಬ್ಲಿಗೆ ನೆತ್ತೇಗೇರಿತ್ತು. ಸದಾ ಕುಡಿತದ ಅಮಲಿನಲ್ಲಿಯೇ ಇರ್ತಿದ್ದ ಕಾಂಬ್ಲಿ ಅಶಿಸ್ತು ಪ್ರದರ್ಶನ ತೋರತೊಡಗಿದವು. ಹೀಗಾಗಿ ಟೆಸ್ಟ್,, ಓಡಿಐ ಪಂದ್ಯಗಳಿಂದ ದೂರಾದರು. ಕೆಲವೇ ವರ್ಷಗಳಲ್ಲಿ ಕಾಂಬ್ಲಿಗೆ ಟೀಂ ಇಂಡಿಯಾ ಬಾಗಿಲು ಮುಚ್ಚಿತು.. ಆ ನಂತರ ಕಾಂಬ್ಲಿ ಜೀವನದ ಹಾದಿ ದುರಂತದತ್ತ ಸಾಗಿತ್ತು.
ಒಂದು ಕಾಲದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದ್ದ ಕಾಂಬ್ಲಿಗೆ ಸೋಲು ಬೆನ್ನಟ್ಟಿದ್ದ ಬೇತಾಳವಾಗಿತ್ತು. ವೃತ್ತಿ ಜೀವನದಲ್ಲೂ ಸೋಲಾಯ್ತು ಎರಡು ಮದುವೆಯಾದರೂ, ಇದೀಗ ಒಂಟಿಯಾಗಿದ್ದಾರೆ. ರಾಜಕೀಯಕ್ಕೆ ಸೇರಿದರೂ ಅದೃಷ್ಠ ಕೈಹಿಡಿಯಲಿಲ್ಲ… ಕೆಲ ಸಿನಿಮಾಗಳಲ್ಲಿ ನಟಿಸಿದರೂ ಅಲ್ಲೂ ಸೋಲಾಯ್ತು.. ಇದೀಗ ಕಾಂಬ್ಲಿ ನಡೆಯಲೂ ಆಗದ ಸ್ಥಿತಿಯಲ್ಲಿದ್ದಾರೆ. ಒಂದಲ್ಲಾ 14 ಬಾರಿ ರಿಹಾಬ್ ಸೆಂಟರ್ ಗಳಿಗೆ ಹೋಗಿದ್ದು, ಅಷ್ಟರ ಮಟ್ಟಿಗೆ ಅವರಿಗೆ ಕುಡಿತದ ಛಟ ರೂಢಿಯಾಗಿತ್ತು. ಒಟ್ನಲ್ಲಿ ಒಂದು ಕಾಲದಲ್ಲಿ ಕ್ರಿಕೆಟ್ ಲೋಕದ ತಾರೆಯಾಗಿದ್ದ ಕಾಂಬ್ಲಿ ಮಾತ್ರ ಇಂದು ಅಸಹಾಯಕ ಸ್ಥಿತಿಯಲ್ಲಿದ್ದಾರೆ.