ಪಂಜಾಬ್: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಮಾಡದೇ ಇರುವವರು ಸಿಗುವವರೇ ಕಡಿಮೆ, ನಮ್ಮ ಜೀವನದಲ್ಲಿ ಏನೇ ನಡೆದರೂ ಅನೇಕರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ನಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣವನ್ನು ಸ್ಕ್ರಾಲ್ ಮಾಡುವುದರಲ್ಲೇ ಕಳೆಯುತ್ತೇನೆ. ನಮಗೆ ತಿಳಿಯದೇ ಇದ್ದರೂ ಸಹ ನಮ್ಮ ಜೀವನ ಹಾಗೂ ಸಂಬಂಧಗಳ ಮೇಲೆ ಸಾಮಾಜಿಕ ಜಾಲತಾಣವು ಭಾರೀ ಪರಿಣಾಮವನ್ನುಂಟು ಮಾಡಿಬಿಡುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಚಾಟಿಂಗ್, ಡೇಟಿಂಗ್ ಸಾಮಾನ್ಯವಾಗಿದೆ. ಆದರೆ ಈ ರೀತಿ ಹುಟ್ಟಿದ ಪ್ರೀತಿ ಬಹಳ ದಿನ ಬದುಕಿಲ್ಲದ ಉದಾಹರಣೆಗಳೇ ಹೆಚ್ಚು. ಇದೀಗ 3 ವರ್ಷದ ಹಿಂದೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಹುಡುಗಿಯನ್ನು ವಿವಾಹವಾಗಲು ಸಕಲ ಸಿದ್ಧತೆಗಳೊಂದಿಗೆ ಮದುಮಗಳು ತಿಳಿಸಿದ್ದ ಜಾಗಕ್ಕೆ ಬಂದಿದ್ದ ವರನಿಗೆ ದೊಡ್ಡ ಶಾಕ್ ಕಾದಿತ್ತು.
ಇತ್ತ ವಧುವೂ ಇಲ್ಲ ಅತ್ತ ಆಕೆ ಹೇಳಿದ್ದ ಕಲ್ಯಾಣ ಮಂಟಪವೂ ಇಲ್ಲವಾದ್ದರಿಂದ ಇದೀಗ ವರ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರುವ ಘಟನೆ ಪಂಜಾಬ್ನ ಮೋಗಾದಲ್ಲಿ ನಡೆದಿದೆ. ಮನ್ಪ್ರೀತ್ ಕೌರ್ ಎಂಬ ಯುವತಿ ಹಾಗೂ ಜಲಂಧರ್ ಮೂಲದ ಯುವಕ ದೀಪಕ್ ಕುಮಾರ್ (24) ಇನ್ಸ್ಟಾದಲ್ಲಿ ಪರಿಚಯವಾಗಿ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು.
ಆದರೆ ಒಮ್ಮೆಯೂ ಮುಖಾಮುಖಿಯಾಗಿ ಭೇಟಿಯಾಗಿಲ್ಲ. ಆನ್ಲೈನ್ನಲ್ಲೇ ವಧು-ವರರ ಕುಟುಂಬಸ್ಥರು ವಿವಾಹ ನಿಶ್ಚಯವೂ ಮಾಡಿಕೊಂಡು ಮದುವೆಗೆ ದಿನಾಂಕ ಕೂಡ ಗೊತ್ತುಪಡಿಸಿ, ಕಲ್ಯಾಣ ಮಂಟಪ ಯಾವುದು ಎಂಬುದನ್ನೂ ಕೂಡ ನಿರ್ಧರಿಸಿದ್ದರು. ಅದರಂತೆಯೇ ವರ ದೀಪಕ್ ಕಳೆದ ತಿಂಗಳು ದುಬೈನಿಂದ (Dubai) ಆಗಮಿಸಿ ಕುಟುಂಬಸ್ಥರೊಂದಿಗೆ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ.
ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚಾಗಲು ಕಾರಣವೇನು ಗೊತ್ತಾ..?
ಮದುವೆಯ ದಿನ ಜಲಂಧರ್ನಿಂದ ಮಂಡಿಯಾಲಿ ಗ್ರಾಮದಿಂದ ಮೋಗಾದಲ್ಲಿನ ಮದುಮಗಳು ಹೇಳಿದ ಸ್ಥಳಕ್ಕೆ ವರ ಹಾಗೂ ಆತನ ಕುಟುಂಬಸ್ಥರು ತೆರಳಿದ್ದರು. ಮೋಗಾ ತಲುಪಿದ ಬಳಿಕ ತಮ್ಮ ಕಡೆಯ ಕೆಲವರು ಅಲ್ಲಿಗೆ ಬಂದು ನಿಮ್ಮನ್ನು ಮದುವೆ ಹಾಲ್ಗೆ ಕರೆದುಕೊಂಡು ಬರುತ್ತಾರೆ ಎಂದು ವಧು ತಿಳಿಸಿದ್ದಳು. ಆದರೆ ಬೆಳಗ್ಗೆಯಿಂದ ಸಂಜೆಯವರೆಗೆ ಕಾದರೂ ಹುಡುಗಿಯ ಕಡೆಯವರ ಪತ್ತೆಯಿರಲಿಲ್ಲ.
ಬಳಿಕ ತಾವೇ ಕಲ್ಯಾಣ ಮಂಟಪ ಹುಡಕುವ ಸಲುವಾಗಿ ಸ್ಥಳಿಯರಲ್ಲಿ ‘ರೋಸ್ ಗಾರ್ಡನ್ ಪ್ಯಾಲೇಸ್’ ಎಲ್ಲಿದೆ ಎಂದು ಕೇಳಿದಾಗ ಅಂತಹದೊಂದು ಜಾಗವೇ ಇಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ತಾನು ಮೋಸ ಹೋಗಿರುವುದನ್ನು ಅರಿತ ಮದುಮಗ ಪೊಲೀಸ್ ಠಾಣೆಗೆ ತೆರಳಿ ವಧು ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾನೆ.
ಮದುವೆ ಸಿಧ್ಧತೆಗಾಗಿ 50,000 ಹಣ ಪಡೆದಿದ್ದ ವಧು:
ತಾನು ದುಬೈನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಇನ್ಸ್ಟಾಗ್ರಾಂನಲ್ಲಿ ಕಳೆದ ಮೂರು ವರ್ಷದಿಂದ ಕೌರ್ ಜತೆಗೆ ಸಂಪರ್ಕದಲ್ಲಿದ್ದೆ ಎಂದು ದೀಪಕ್ ತಿಳಿಸಿದ್ದಾನೆ. ಆಕೆ ಆತನೊಂದಿಗೆ ತನ್ನ ಫೋಟೋಗಳನ್ನು ಹಂಚಿಕೊಂಡಿದ್ದಳು. ಆದರೆ ಎಂದಿಗೂ ಪರಸ್ಪರ ಭೇಟಿ ಮಾಡಿರಲಿಲ್ಲ. ಇಬ್ಬರೂ ಮದುವೆಯಾಗುವುದಾಗಿ ತೀರ್ಮಾನಿಸಿದ ನಂತರ ಫೋನ್ ಮೂಲಕವೇ ಎರಡೂ ಕುಟುಂಬದ ಹಿರಿಯರು ಮಾತುಕತೆಗಳನ್ನು ನಡೆಸಿದ್ದರು.
ಮದುವೆ ಸಿದ್ಧತೆಗಾಗಿ ಆಕೆಗೆ ದಿನೇಶ್ 50 ಸಾವಿರ ರೂ ಹಣ ಸಹ ಕಳುಹಿಸಿದ್ದ. ಮದುವೆ ಸ್ಥಳಕ್ಕೆ 150 ಬರಾತಿಗಳ ಜತೆ ತೆರಳಿದ್ದಲ್ಲದೆ, ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದೆವು. ಕ್ಯಾಟರಿಂಗ್ ಮತ್ತು ವಿಡಿಯೋಗ್ರಾಫರ್ಗೆ ಮುಂಗಡ ಹಣ ಕೂಡ ಪಾವತಿಸಿದ್ದೆವು ಎಂದು ದೀಪಕ್ನ ತಂದೆ ಪ್ರೇಮ್ ಚಂದ್ ತಿಳಿಸಿದ್ದಾರೆ.
ತಾನು ಮೋಗಾದವಳಾಗಿದ್ದು, ಫಿರೋಜ್ಪುರದಲ್ಲಿ ಕೆಲಸ ಮಾಡುತ್ತಿರುವುದಾಗಿ ಮನ್ಪ್ರೀತ್ ಕೌರ್ ಹೇಳಿಕೊಂಡಿದ್ದಳು. ಮದುಮಗಳ ಫೋನ್ ಸ್ವಿಚ್ ಆಫ್ ಆಗಿದ್ದು, ಆಕೆಯನ್ನು ಸಂಪರ್ಕಿಸುವುದು ವರನ ಕಡೆಯವರಿಗೆ ಸಾಧ್ಯವಾಗುತ್ತಿಲ್ಲ ಎಂದು ದೀಪಕ್ ಕುಮಾರ್ ಕಡೆಯಿಂದ ದೂರು ದಾಖಲಿಸಲಾಗಿದೆ ಎಂಬುದಾಗಿ ಮೋಗಾದ ಸಹಾಯಕ ಸಬ್ ಇನ್ಸ್ಪೆಕ್ಟರ್ ಹರ್ಜಿಂದರ್ ಸಿಂಗ್ ತಿಳಿಸಿದ್ದಾರೆ.