ಮಂಗಳೂರು: ಕರ್ನಾಟಕದ ಗಡಿನಾಡು ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಕೇಳಿ ಬಂದಿದೆ. ಕಾಸರಗೋಡಿನ ಬದಿಯಡ್ಕ ನಿವಾಸಿ ಹಿಂದೂ ಯುವತಿ ನಾಪತ್ತೆಯಾಗಿದ್ದು, ಇದೀಗ ಅನ್ಯಕೋಮಿನ ಯುವಕನ ಜೊತೆ ಮದುವೆಯಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ.
ಕಾಸರಗೋಡಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದ ನೇಹಾ ಮೇ 23 ರಂದು ಮನೆಯಿಂದ ತೆರಳಿದ್ದು ಬಳಿಕ ದಿಢೀರ್ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ಅಲ್ಲದೇ ಅಪಹರಣದ ಅನುಮಾನ ವ್ಯಕ್ತಪಡಿಸಿದ್ದರು.
Pension Rules: ಗಂಡನ ಸಾವಿನ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ? EPFO ನಿಯಮದಲ್ಲಿ ಏನಿದೆ..?
ಇದಾದ ಬಳಿಕ ಬದಿಯಡ್ಕದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವತಿ ನೇಹಾ ಹಾಗೂ ಯುವಕ ಮಿರ್ಶಾದ್ ಭಾವಚಿತ್ರ ಸಹಿತ ನೋಟೀಸ್ ಅಲ್ಲಿನ ಬೊರ್ಡ್ ನಲ್ಲಿ ಪತ್ತೆಯಾಗಿತ್ತು. ಇದೀಗ ಇಬ್ಬರೂ ಬದಿಯಡ್ಕ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪೊಲೀಸರು ಕಾಸರಗೋಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ಯುವತಿ ಸ್ವ-ಇಚ್ಛೆಯಿಂದ ಯುವಕನ ಜೊತೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಾಳೆ.