ಲಖನೌ:- ಸಾಧುಗಳ ವೇಷ ಧರಿಸಿ ಲೂಟಿ ಮಾಡುತ್ತಿದ್ದ ಯುವಕರಿಗೆ ಸಾರ್ವಜನಿಕರಿಂದ ಗೂಸಾ ಕೊಟ್ಟ ಘಟನೆ ಜರುಗಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಜರುಗಿದೆ. ನಾಲ್ವರನ್ನು ದೈಹಿಕವಾಗಿ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದ್ದು, ಈ ಘಟನೆಯ ವಿಡಿಯೋದಲ್ಲಿ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಚೆನ್ನಾಗಿ ಆಟವಾಡಿಲ್ಲ ಅಂತ ಫುಟ್ಬಾಲ್ ಆಟಗಾರರಿಗೆ ಥಳಿಸಿದ ದೈಹಿಕ ಶಿಕ್ಷಕ!
ಶುಕ್ರವಾರ ಬೆಳಗ್ಗೆ ಸಾಧುಗಳ ವೇಷ ಧರಿಸಿದ ಪುರುಷರು ಮಹುರಕಲಾ ಗ್ರಾಮದ ಅಂಗಡಿಯೊಂದಕ್ಕೆ ಭೇಟಿ ನೀಡಿದಾಗ ಗಲಾಟೆ ಶುರುವಾಗಿತ್ತು. ಅಂಗಡಿಯವನಿಗೆ ತಿಲಕವನ್ನು ಹಚ್ಚಿ, ಪ್ರಸಾದವನ್ನು ಕೊಡುವ ಮೊದಲು 1,100 ರೂಪಾಯಿಗಳನ್ನು ಕೊಡುವಂತೆ ಮನವೊಲಿಸಿದರು. ಒಮ್ಮೆ ಅಂಗಡಿಯವನು ಪ್ರಜ್ಞಾಹೀನನಾಗಿ ಬಿದ್ದಾಗ, ಖದೀಮರು ಪರಾರಿಯಾಗುವ ಮೊದಲು ಅಂಗಡಿಯಲ್ಲಿದ್ದ ಮೂರು ಗೋಣಿ ಸಾಸಿವೆ ಮತ್ತು ಹಣವನ್ನು ಕದ್ದೊಯ್ದರು.
ಮರುದಿನ ಬೆಳಿಗ್ಗೆ, ಪುರುಷರು ಗಂಗಾಖೇಡಕ್ಕೆ ಬಂದರು, ಅಲ್ಲಿ ಸ್ಥಳೀಯರು ಅವರನ್ನು ಗುರುತಿಸಿದರು. ಅಂಗಡಿಯವರು ಅವರನ್ನು ಗುರುತಿಸಿದ್ದು, ಗ್ರಾಮಸ್ಥರಿಂದ ಸಾರ್ವಜನಿಕವಾಗಿ ಥಳಿಸಿದ್ದಾರೆ. ಅಂಗಡಿಯವರು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ. ಆದರೆ ಅದನ್ನು ಕೇಳದ ಸ್ಥಳೀಯರು ಅವರನ್ನು ಚೆನ್ನಾಗಿ ಧಳಿಸಿದ್ದಾರೆ.
ಪೊಲೀಸರು ನಾಲ್ವರನ್ನು ಬಂಧಿಸಿ ಕಳವು ಮಾಡಿದ ವಸ್ತುಗಳನ್ನೂ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಮೀರತ್ನ ಸಂಸಾಪುರ ಗ್ರಾಮದ ನಿವಾಸಿಗಳಾದ ಆಕಾಶ್, ಅಕ್ಷಯ್, ರಾಕೇಶ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ. ರುದ್ರಾಕ್ಷಿ ಅಥವಾ ಪ್ರಸಾದ ನೀಡಿ ಜನರನ್ನು ವಂಚಿಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.