ಬಾಗಲಕೋಟೆ:– ಬಾದಾಮಿ ಕ್ಷೇತ್ರದ ಗುಳೆದಗುಡ್ಡ ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಲಾಂಗು ಮತ್ತು ಮಚ್ಚಿನ ಸದ್ದು ಮಾಡಿದ ಘಟನೆ ಜರುಗಿದೆ.
ರವಿಕೆ ಹಾಕದೇ ಜಿಮ್ ನಲ್ಲಿ ವರ್ಕೌಟ್: ಸೀರೆ ಓಕೆ ತೋರ್ಸೋದ್ಯಾಕೆ ಯಾಕೆ ಎಂದ್ರೂ ನೆಟ್ಟಿಗರು!
ಲಾಂಗು, ಮಚ್ಚು, ಕಟ್ಟಿಗೆ, ದೊಣ್ಣೆ, ಕಲ್ಲು ಸಮೇತ ಗುಂಪು ಬಂದಿದ್ದವು. ಪೊಲೀಸರ ಮುನ್ನೆಚ್ಚರಿಕೆಯಿಂದ ಭಾರಿ ಅನಾಹುತ ತಪ್ಪಿದೆ. 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಶಿವು ಕೊಡಬಾಗಿ, ಇಮಾಮ್ ಕಲಾಶಿ, ವಿಶ್ವನಾಥ ಅಂಬಿಗೇರ್, ಮೊಹಮ್ಮದ್ ಅಲಿ ಮಂಟೂರ್ ಬಂಧಿತರು. ಸಮೀರ್ ಮುಲ್ಲಾ, ವಿಲಾಸ್ ರಾಠೋಡ, ಇಮ್ರಾನ್ ಗಾಡಿ, ಸಮೀರ್ ಚಿಮ್ಮಲಗಿ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ಸಂಬಂಧ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..