ಬೆಂಗಳೂರು: ಇವತ್ತು ಬೆಳ್ ಬೆಳಗ್ಗೆಯೇ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ರು.. ಕೋರ್ಟ್ ವಾರೆಂಟ್ ಸಮೇತ ರಾಜ್ಯದ 54 ಕಡೆ ದಾಳಿ ಮಾಡಿದ್ದ ಅಧಿಕಾರಿಗಳಿಗೆ ಭ್ರಷ್ಟರ ಮನೇಲಿ ಲಕ್ಷಗಟ್ಟಲೆ ಹಣ, ಕೆಜಿಗಟ್ಟಲೆ ಚಿನ್ನಾಭರಣ ಸಿಕ್ಕಿವೆ.. ಇವತ್ತಿನ ಮೆಗಾ ರೇಡ್ ನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೇ ನೋಡಿ..
ಹೌದು.. ಇವತ್ತು ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಚಳಿ ಬಿಡಿಸಿದ್ದಾರೆ.. ರಾಜ್ಯಾದ್ಯಂತ 54 ಕಡೆ ದಾಳಿ ನಡೆಸಿದ್ದ ಲೋಕಾ ಟೀಂ, ಬೆಂಗಳೂರಿನ 6 ಕಡೆ, ಬೆ. ಗ್ರಾಮಾಂತರದ 2 ಕಡೆ, ಶಿವಮೊಗ್ಗ, ತುಮಕೂರು, ಯಾದಗಿರಿಯಲ್ಲಿನ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಹಲವು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದು ಈ ವೇಳೆ ಲಕ್ಷಾಂತರ ರೂಪಾಯಿ ಹಣ ಮತ್ತು ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿವೆ..
ಜನ್ರಿಂದ ದೂರುಗಳ ಮೇಲೆದೂರು ಬಂದ ಹಿನ್ನಲೆ ಇವತ್ತು ಬೆಳಗಿನ ಜಾವ ಆರು ಗಂಟೆಗೆ ಭ್ರಷ್ಟರ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಟೀಂ ದಾಳಿ ನಡೆಸಿತ್ತು.. ಬೆಂಗಳೂರು ನಗರದಲ್ಲಿ ಕೆ ಐ ಎ ಡಿಬಿ ಎಫ್ ಡಿ ಆಗಿರುವ ಬಿವಿ ರಾಜ , ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ರಮೇಶ್ ಕುಮಾರ್ , ಮಾಪನ ಇಲಾಖೆಯಲ್ಲಿ ಡೆಪ್ಯೂಟಿ ಕಂಟ್ರೋಕರ್ ಆಗಿರುವ ಅಥಃರ್ ಆಲಿ , ಎಫ್ ಡಿಎ ಬೆಂಗಳೂರು ನಾರ್ತ್ ಸಬ್ ಡಿವಿಷನ್ ನ ಮಂಜುನಾಥ್ ಟಿ ಆರ್ ಎಂಬುವವರ ಮನೆ ಮೇಲೆ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನಾಭರಣಗಳು ಸಿಕ್ಕಿದೆ..
Valmiki Scam: SITಯಿಂದ 85.25 ಕೋಟಿ ಜಪ್ತಿ: ಯಾವ ಆರೋಪಿಯಿಂದ ಎಷ್ಟು ಹಣ ವಶಕ್ಕೆ?ಅಂಕಿ-ಅಂಶದ ವಿವರ
ಇದರಲ್ಲಿ ಇಂಟ್ರಷ್ಟಿಂಗ್ ವಿಚಾರ ಅಂದ್ರೆ ಪ್ರಮುಖವಾಗಿ ಮಾಪನ ಇಲಾಖೆಯ ಡೆಪ್ಯೂಟಿ ಕಂಟ್ರೋಲರ್ ಅತ್ಹರ್ ಆಲಿ ಮನೆ ಮೇಲೆ ದಾಳಿ ಮಾಡಿದಾಗ ಕಂಡು ಬಂದ ದೃಶ್ಯ.. ಈತನ ಕಚೇರಿ ಇರುವುದು ದೂರದಲ್ಲೆಲ್ಲೂ ಅಲ್ಲ ನಗರ ಪೊಲೀಸ್ ಆಯುಕ್ತರ ಕಚೇರಿ ಪಕ್ಕದಲ್ಲಿಯೇ.. ಇಂತಹ ಕಡೆ ಈತ ಕೆಲಸ ಮಾಡಿಕೊಂಡು ಕೋಟಿಗಟ್ಟಲೆ ಭ್ರಷ್ಟಾಚಾರ ನಡೆಸಿದ್ದಾನೆ.. ದಾಳಿ ವೇಳೆ ತಾನೂ ತನ್ನ ಕುಟುಂಬದ ಸಮೇತ ಮನೆಯಲ್ಲೇ ಇದ್ದ.. ಒಂದ್ಕಡೆ ಅಧಿಕಾರಿಗಳ ಮನೆ ಇಂಚಿಂಚೂ ಹುಡುಕ್ತಿದ್ರೆ ಅತ್ತ ಅತ್ಹರ್ ಅಲಿ ಹೃದಯ ಢವ..ಢವ.. ಅಂತಿತ್ತು.. ಮನೇಲಿ ಬಚ್ಚಿಟ್ಟಿರೋ ಲಕ್ಷ ಲಕ್ಷ ಹಣ, ಚಿನ್ನಾಭರಣ ಸಿಕ್ಬಿಡುತ್ತೋ ಅಂತಾ ಒದ್ದಾಡ್ತಿತ್ತು.. ಅವ್ರ ಮಗ್ಳು ಒಂದು ಹೆಜ್ಜೆ ಮುಂದೆ ಹೋಗಿ ಮನೇಲಿದ್ದ 2kg 200gm ಚಿನ್ನವನ್ನ ಬ್ಯಾಗ್ ವೊಂದರಲ್ಲಿ ಕಟ್ಟಿದ್ದಾಕೆ ಸೀದಾ ಪಕ್ಕದಮನೆಗೆ ಎಸೆದಿದ್ಳು.. ಅಲ್ಲೂ ಅದೃಷ್ಟ ಕೈಕೊಟ್ಟು ಕಾಂಪೌಂಡ್ ಗೆ ಬ್ಯಾಗ್ ಬಿದ್ದಿದೆ.. ಕೂಡಲೇ ಅಲರ್ಟ್ ಆದ ಕೋಕಾ ಟೀಂ ಬ್ಯಾಗ್ ಚೆಕ್ ಮಾಡ್ದಾಗ ಚಿನ್ನಾಭರಣ ನೋಡಿ ಶಾಕ್ ಆಗಿದ್ರು.. ಮತ್ತೆ ಮನೆ ಚೆಕ್ ಮಾಡ್ದಾಗ 25ಲಕ್ಷ ಕ್ಯಾಶ್ ಕೂಡ ಸಿಕ್ಕಿದೆ.. ಅಷ್ಟೇ ಅಲ್ಲ ಎರಡು ಕೇಜಿ ಬೆಳ್ಳಿ ,ಐವತ್ತಕ್ಕೂ ಹೆಚ್ಚು ವಾಚ್ ಗಳೂ ಸಿಕ್ಕಿವೆ.. ಸದ್ಯಕ್ಕೆ ಇವೆಲ್ಲಾವು ಸ್ಯಾಂಪಲ್ ಅಷ್ಟೆ.. ಇನ್ನು ಪರಿಶೀಲನೆ ವೇಳೆ ಈತ ಎಲ್ಲೆಲ್ಲಿ ಆಸ್ತಿಗಳನ್ನ ಮಾಡಿದ್ದ , ಸಂಬಂಧಿಕರ ಹೆಸರಿನಲ್ಲಿ ಸ್ನೇಹಿತರ ಹೆಸರಿನಲ್ಲಿ ಕೂಡ ಬೇನಾಮಿ ಆಸ್ತಿಗಳು ಮಾಡಿರುವ ಬಗ್ಗೆ ಲೋಕಾಯುಕ್ಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ..
ಈತನ ಮನೇಲಿ ಅಷ್ಟೇ ಅಲ್ಲ ಎಫ್ ಡಿ ಎ ಆಗಿರುವ ಮಂಜುನಾಥ್ ಟಿ ಆರ್ ಮನೆಯಲ್ಲಿ ಕೂಡ 62 ಲಕ್ಷ ಮೌಲ್ಯದ 1110 ಗ್ರಾಂ ಚಿನ್ನಾಭರಣವನ್ನೂ ಕೂಡ ರಿಕವರಿ ಮಾಡಲಾಗಿದೆ ಸದ್ಯ ಈ ಆಸ್ತಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.. ಸದ್ಯ ಲೋಕಾಯುಕ್ತ ಟೀಂನ ದಾಳಿ ಮುಂದುವರೆದಿದ್ದು ಮತ್ತಷ್ಟು ಹೆಚ್ಚಿನ ಮೌಲ್ಯ ಸೀಜ್ ಆಗಲಿದೆ.. ಮುಂದೆ ಎಲ್ಲದಕ್ಕೂ ಅಧಿಕಾರಿಗಳು ಲೆಕ್ಕ ಕೊಡಬೇಕಿದೆ..