ಬೆಂಗಳೂರು:- ಸಿಎಂಗೆ ಲೋಕಾಯುಕ್ತ ನೋಟೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂಗೆ ಲೋಕಾಯುಕ್ತ ನೋಟೀಸ್ ಕೊಟ್ಟು ವಿಚಾರಣೆಗೆ ಬರಲು ತಿಳಿಸಿದ್ದಾರೆ. ಸಿಎಂ ಆಗಿ ವಿಚಾರಣೆಗೆ ಹೋಗುತ್ತೀರೋ, ಆರೋಪಿಯಾಗಿ ಹೋಗುತ್ತೀರೋ ಎಂದು ಸಿಎಂ ತಿಳಿಸಬೇಕು. ಒಬ್ಬ ಬೇಜವಾಬ್ದಾರಿ ಮಂತ್ರಿ ಜಮೀರ್ ಅಹಮದ್ ಇಟ್ಟುಕೊಂಡು ಮಠ ಮಾನ್ಯ, ರೈತರ ಜಮೀನು ಹೊಡೆಯುವ ಯತ್ನ ಜಮೀರ್ ನೇತೃತ್ವದಲ್ಲಿ ನಡೆಯುತ್ತಿದೆ.
ಇದಕ್ಕೆ ಸಿಎಂ ಕುಮ್ಮಕ್ಕು ಕೂಡಾ ಇದೆ. ಸಿಎಂ ಕುಟುಂಬವೇ ಇಂದು ಆರೋಪಿ ಸ್ಥಾನದಲ್ಲಿ ನಿಂತಿದೆ. ಯಾವಾಗಲೋ ರಾಜೀನಾಮೆ ಕೊಡಬೇಕಿತ್ತು. ಅವರು ರಾಜೀನಾಮೆ ಕೊಡುವುದು ಸಿದ್ಧ. ಐದು ವರ್ಷ ಸಿಎಂ ಆಗಿರುತ್ತೇನೆ ಅಂತಾ ಸಿದ್ದರಾಮಯ್ಯ ರಾಜ್ಯದ ಜನತೆಗೆ ಹೇಳಲಿ ನೋಡೋಣ ಎಂದರು.
ಹೇಳಲು ಅವರಿಗೆ ಸಾಧ್ಯವೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಎಲ್ಲರೂ ಮಾತುಕತೆ ಮಾಡಿ ರಾಜೀನಾಮೆಗೆ ಮುಹೂರ್ತ ಸಿದ್ದ ಮಾಡಿದ್ದಾರೆ. ಯಾವಾಗ ರಾಜೀನಾಮೆ ಅಂತಾ ಸಿದ್ದರಾಮಯ್ಯನವರೇ ಹೇಳಬೇಕು. ರಾಜೀನಾಮೆ ಕೊಡುವುದು ಶತಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಇದನ್ನು ನಾನು ಹೇಳುತ್ತಿದ್ದೇನೆ ಎಂದರು.