ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತದ ಚುರುಕು ಮುಟ್ತಿಲ್ಲ ಅನ್ಸುತ್ತೆ. ಒಂದರ ಮೇಲೆ ಒಂದು ದಾಳಿ ನಡೀತಾ ಇದ್ರು ಸರ್ಕಾರಿ ಅಧಿಕಾರಿಗಳು ಎಚ್ಚೆತ್ತುಕೊಳ್ತಿಲ್ಲ. ಇಂದು ಕೂಡ ರಾಜ್ಯದಲ್ಲಿ ಲೋಕಾಯಕ್ತ ಮೆಗಾ ರೇಡ್ ನಡೆದಿದ್ದು, ಭ್ರಷ್ಟರ ಕೋಟೆಯ ಸಂಪತ್ತು ಬಯಲಾಗಿದೆ. ಅದರ ಫುಲ್ ಡಿಟೆಲ್ಸ್ ಇಲ್ಲಿದೆ. ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮತ್ತೊಮ್ಮೆ ಮೆಗಾ ರೇಡ್ ನಡೆಸಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ಅಖಾಡಕ್ಕಿಳಿದ ಲೋಕಾಯುಕ್ತ ಅಧಿಕಾರಿಗಳು ಚಳಿಯಲ್ಲಿ ಬೆಚ್ಚಗೆ ಮಲಗಿದ್ದ ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಯೆಸ್. ಬೆಂಗಳೂರಿನ ಮೂವರು ಅಧಿಕಾರಿಗಳು ಸೇರಿದಂತೆ ರಾಜ್ಯದ 13 ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. 13 ಅಧಿಕಾರಿಗಳ 63ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲೇ ದಾಳಿ ನಡೆಸಿರೋ ಲೋಕಾಯುಕ್ತ ಟೀಂ ಅಧಿಕಾರಿಗಳ ಬೆವರಿಳಿಸಿದ್ದಾರೆ. ಅಷ್ಟಕ್ಕೂ ಯಾವ್ಯಾವ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ ಅನ್ನೋದನ್ನ ತೋರಿಸ್ತೀವಿ ನೋಡಿ.
ಲೋಕಾಯುಕ್ತ ರೇಡ್ (ಹೆಡ್ಡರ್)
- ಚನ್ನಕೇಶವ H.D, EE, ಬೆಸ್ಕಾಂ, ಜಯನಗರ ಉಪವಿಭಾಗ, ಬೆಂಗಳೂರು
- ಸುಧಾಕರ್ ರೆಡ್ಡಿ , ವಿಜಿಲೆನ್ಸ್ EE ಬೆಸ್ಕಾಂ, ಬೆಂಗಳೂರು
- H.S.ಕೃಷ್ಣಮೂರ್ತಿ, ಕಣ್ಮಿಣಿಕೆ ಹಾ.ಉ.ಸ.ಸಂಘ, ಕುಂಬಳಗೋಡು
- H.D.ನಾರಾಯಣ ಸ್ವಾಮಿ, ನಿವೃತ್ತ ವೈಸ್ ಚಾನ್ಸಲರ್, ಕರ್ನಾಟಕ ಪಶುವೈದ್ಯಕೀಯ ವಿವಿ, ಬೀದರ್
- ಸುನೀಲ್ ಕುಮಾರ್, ಸಹಾಯಕ(ಹೊರಗುತ್ತಿಗೆ), ಹಣಕಾಸು ಕಚೇರಿ, ಕರ್ನಾಟಕ ಪಶುವೈದ್ಯಕೀಯ ವಿವಿ, ಬೀದರ್
- ಡಾ.ಪ್ರಭುಲಿಂಗ್, DHO ಯಾದಗಿರಿ
- ಬಿ ಮಾರುತಿ, RFO, ಆನೆಗುಂಡಿ ಡಿವಿ, ಪ್ರಾದೇಶಿಕ ಶ್ರೇಣಿ, ಗಂಗಾವತಿ, ಕೊಪ್ಪಳ
- ಚಂದ್ರಶೇಖರ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ, ಬಳ್ಳಾರಿ
- ಶರಣಪ್ಪ, ಆಯುಕ್ತರು, ನಗರಸಭೆ, ಯಾದಗಿರಿ.
- ಮಹದೇವ ಸ್ವಾಮಿ M S, ಉಪನ್ಯಾಸಕ, ಸ.ಪ್ರ.ದ.ಕಾಲೇಜು, ನಂಜನಗೂಡು
- ತಿಮ್ಮರಾಜಪ್ಪ, EE, KRDL, ವಿಜಯಪುರ ಜಿಲ್ಲೆ. (ಪ್ರಸ್ತುತ ಬೆಳಗಾವಿಯಲ್ಲಿ ಇಇ)
- ಮುನೇಗೌಡ ಎನ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ
- ಬಸವರಾಜ, ಸ್ಟೋರ್ ಕೀಪರ್, ಗ್ರೇಡ್-2, ಓ & ಎಂ ಸಿಟಿ ವಿಭಾಗ ಅಂಗಡಿ, ಹೆಸ್ಕಾಂ, ಹುಬ್ಬಳ್ಳಿ, (ನಿವೃತ್ತ)
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಷ್ಟು ಸರ್ಕಾರಿ ಅಧಿಕಾರಿಗಳ ಮೇಲೆ ರೇಡ್ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಸಾಕಷ್ಟು ಪ್ರಮಾಣದ ಹಣ, ಚಿನ್ನಾಭರಣ ಸೇರಿದಂತೆ ಆಸ್ತಿಪಾಸ್ತಿ ಪತ್ತೆಯಾಗಿದೆ. ಬೆಂಗಳೂರಿಮ ಜಯನಗರ ಉಪವಿಭಾಗ ಇಇ ಬೆಸ್ಕಾಂ ಚೆನ್ನಕೇಶವ ಮನೆಯಲ್ಲಿ ಕೋಟ್ಯಾತರ ರೂ. ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ. ಅಮೃತಹಳ್ಳಿಯ ಮಿಥುನ ಅಪಾರ್ಟಮೆಂಟ್ನಲ್ಲಿರೋ ಚೆನ್ನಕೇಶವ ಮನೆಗೆ ಬೆಳಗ್ಗೆ 6 ಗಂಟೆಗೆ ಮೂರು ವಾಹನದಲ್ಲಿ ಬಂದಿದ್ದ 13 ಜನ ಅಧಿಕಾರಿಗಳು ದಾಳಿ ನಡೆಸಿದ್ರು.
ಈ ದಾಳಿಯಲ್ಲಿ 6 ಲಕ್ಷ ನಗದು, 3ಕೆಜಿ ಚಿನ್ನ, 28 ಕೆಜಿ ಬೆಳ್ಳಿ, 25 ಲಕ್ಷ ಮೌಲ್ಯದ ಡೈಮಂಡ್ ಜುವೆಲರಿ, ಸೇರಿ 1.5 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿದೆ. ಅಷ್ಟಲ್ಲೇ ಯಲಹಂಕ ಬಳಿ ಕಮರ್ಷಿಯಲ್ ಕಟ್ಟಡ ನಿರ್ಮಿಸುತ್ತಿರೋದು ಪತ್ತೆಯಾಗಿದೆ. ಆದ್ರೆ ದಾಳಿ ವೇಳೆ ಶಾಕ್ ಒಳಗಾದ ಚೆನ್ನಕೇಶವಗೆ ಬಿಪಿ ಹೆಚ್ಚಾಗಿ ಆರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ಅಧಿಕಾರಿಗಳು ಮಾತ್ರೆಗಳನ್ನ ತಂದುಕೊಟ್ಟ ಬಳಿಕ ಸುಧಾರಿಸಿಕೊಂಡು ಅಧಿಕಾರಿಗಳ ಪರಿಶೀಲನೆಗೆ ಸಹಕಾರ ನೀಡಿದ್ದಾರೆ. ಹಾಗೆ ಚನ್ನಕೇಶವ ಸೋದರ ಮಾನವ ಮನೆ ಮೇಲೂ ದಾಳಿ ನಡೆದಿದ್ದು ಸುಮಾರು 1 ಕೋಟಿ ನಗದು ಸಿಕ್ಕಿದೆ.
ಬೆಸ್ಕಾಂ ಜಾಗೃತ ದಳದ ಅಧಿಕಾರಿ ಸುಧಾಕರ್ ರೆಡ್ಡಿಯ ಬೆಂಗಳೂರಿನ ಮನೆ, ಚಿಂತಾಮಣಿಯ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸುಧಾಕರ್ಗೆ ಸೇರಿದ ಐದು ಕಡೆ ದಾಳಿ ನಡೆದಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಸಾತನೂರು ಬಳಿಯ ನಿವಾಸಕ್ಕೆ ಲೋಕಾಯುಕ್ತ ಎಸ್ ಪಿ ವಂಶಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು.
ಹಾಗೆ ಈ ದಾಳಿಯಲ್ಲಿ ಸುಧಾಕರ್ ರೆಡ್ಡಿಗೆ ಸಂಬಂಧಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಗ್ರಾಮೀಣ ಪ್ರದೇಶದಲ್ಲಿ 12 ಎಕರೆ ಕೃಷಿ ಜಾಗ ಪತ್ತೆಯಾಗಿದ್ದು, ಸುಧಾಕರ್ ಪತ್ನಿ ಟೆಲಿ ಇಂಡಿಯನ್ ಪ್ರವೈಟ್ ಲಿಮಿಟೆಡ್ ಎಂಬ ಕಂಪನಿ ಹೊಂದರಲ್ಲಿ ನಿರ್ದೇಶಕರಾಗಿದ್ದು, ಆ ಕಂಪನಿಯಲ್ಲಿ ೭೦೦ ರಿಂದ ೮೦೦ರಷ್ಟು ಜನ ಕೆಲಸ ಮಾಡ್ತಿದ್ದಾರಂತೆ. ಸದ್ಯ ಕಂಪನಿಯ ಮೇಲೂ ಸಹ ದಾಳಿ ನಡೆಸಿದ್ದು, ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.