ತುಮಕೂರು : ಬೆಳ್ಳಾವಿ ಕಾರದ ಮಠದಲ್ಲಿ ಶ್ರೀ ಶಿವಯೋಗಿ ಕರ್ತೃ ಗದ್ದುಗೆ ಲೋಕಾರ್ಪಣೆ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಗೃಹ ಸಚಿವ ಡಾ ಪರಮೇಶ್ವರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಜ್ಯೋತಿ ಗಣೇಶ್ ಸೇರಿದಂತೆ ಹಲವರು ರಾಜಕೀಯ ನಾಯಕರು, ವಿವಿಧ ಮಠಾಧೀಶರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಗುರುಪರಂಪರೆ ಆಚಾರ ಸಂಸ್ಕಾರ ಸಂಸ್ಕೃತಿಯನ್ನ ಮರೆತಿದ್ದೇವೆ. ಹೆತ್ತ ತಂದೆತಾಯಿಗಳನ್ನ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇಂದಿನ ಯುವ ಪೀಳಿಗೆ ಮಾರು ಹೋಗಿರುವುದು ದುರಂತ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟಿದ್ದೇವೆ ಸಂಸ್ಕಾರ ಕೊಡುವುದರಲ್ಲಿ ವಿಫಲವಾಗಿದ್ದೇವೆ. ಈಗಲೂ ಕಾಲಮಿಂಚಿಲ್ಲ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು ಪ್ರಯತ್ನಿಸೋಣ ಎಂದರು.
ನರೇಂದ್ರ ಮೋದಿಜಿಯವರು ದೇಶದ ಅಭಿವೃದ್ಧಿ ಕನಸು ಕಾಣುತ್ತ ಯುವಜನತೆ ಮೇಲೆ ವಿಶ್ವಾಸ ವಿಟ್ಟಿದ್ದಾರೆ. ಬೇರೆ ದೇಶಗಳಲ್ಲಿ ಭಾರತೀಯರನ್ನ ಭಿಕ್ಷುಕರಂತೆ ಕಾಣುತ್ತಿದ್ದರು. ಇಂದು ಭಾರತೀಯ ಯಾವುದೇ ದೇಶಕ್ಕೆ ಹೋದರು ತಲೆಯೆತ್ತಿ ನಡೆಯುವಂತೆ ಅಗಿದೆ. ಪ್ರತಿಯೊಬ್ಬರಿಗೆ ಗೌರವ ಸಿಗುತ್ತಿದೆ. ಇದಕ್ಕೆ ಕಾರಣ ನರೇಂದ್ರ ಮೋದಿಯವರು ಎಂದರು.
ಮಠಾಧೀಶರು ಯಡಿಯೂರಪ್ಪರವರಿಗೆ ಕಷ್ಟ ಬಂದಾಗಲೆಲ್ಲಾ ಜೊತೆಯಲ್ಲಿ ನಿಂತು ಮಾರ್ಗದರ್ಶನ ನೀಡಿದ್ದರು. ಎಷ್ಟೇ ಅಡೆತಡೆ ಬಂದರೂ ನಾಡಿನ ಕೆಲಸ ಯಡಿಯೂರಪ್ಪನವರು ಮಾಡಿದ್ದರು. ನಾನು ಕೂಡ ಅದೇ ರೀತಿಯಲ್ಲಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೀನಿ ಎಂರು. ಮಠ ಮಾನ್ಯಗಳಿಗೆ ಆರ್ಥಿಕವಾಗಿ ಶಕ್ತಿ ತುಂಬಿದ್ದರು ಎಂದರು.