ನವದೆಹಲಿ:- ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಲ್ಲಿ ನರೇಂದ್ರ ಮೋದಿ 6,12,970 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಮೂಲಕ 2014, 2019 ಮತ್ತು 2024ರಲ್ಲಿ ವಾರಣಾಸಿಯಲ್ಲಿ ಜಯಗಳಿಸುವ ಮೂಲಕ ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು
2014 ಮತ್ತು 2019ರ ನಂತರ ಸತತ ಮೂರನೇ ಬಾರಿಗೆ ಮೋದಿ ವಾರಣಾಸಿಯಲ್ಲಿ ಗೆಲುವು ದಾಖಲಿಸಿದ್ದಾರೆ. ಪಿಎಂ ಮೋದಿ ಅವರು ಕಾಂಗ್ರೆಸ್ ಅಜಯ್ ರೈ ವಿರುದ್ಧ 152513 ಅಂತರದೊಂದಿಗೆ ಗೆಲುವು ಸಾಧಿಸಿದ್ದಾರೆ. ಮೋದಿ ಒಟ್ಟು 6,12,970 ಮತಗಳನ್ನು ಪಡೆದು, ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಫಲಿತಾಂಶ: JDS ಪಕ್ಷ ಮತ್ತೊಮ್ಮೆ ಬಲಿಷ್ಠ ಅನ್ನೊದು ಸಾಬೀತಾಗಿದೆ, TA ಶರವಣ
2014ರಲ್ಲಿ ಪ್ರಚಾರದ ಸಮಯದಲ್ಲಿ, ಮೋದಿ ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಹಗರಣಗಳ ಮೇಲೆ ಮೋದಿ ಗಮನ ಕೇಂದ್ರೀಕರಿಸಿದ್ದರು. ಅಲ್ಲದೇ ಗುಜರಾತ್ನಲ್ಲಿ ಹೆಚ್ಚಿನ ಪ್ರಮಾಣದ ಜಿಡಿಪಿ ಬೆಳವಣಿಗೆಯನ್ನು ಸೃಷ್ಟಿಸಿದ ರಾಜಕಾರಣಿ ಎಂಬ ತಮ್ಮ ಇಮೇಜ್ ಅನ್ನು ಬಲಪಡಿಸಿಕೊಂಡಿದ್ದರು. ಬಳಿಕ 2019ರಲ್ಲಿ ಮೋದಿ ಅಲೆ ಇಡೀ ದೇಶಾದ್ಯಂತ ಆವರಿಸಿದ್ದು, ಮೋದಿ ಸುಲಭವಾಗಿ ಗೆಲುವು ಸಾಧಿಸಿದ್ದರು
ಪ್ರಧಾನಿ ನರೇಂದ್ರ ಮೋದಿ ಅವರು 2019 ರಲ್ಲಿ ವಾರಣಾಸಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆಎಸ್ಪಿ ಮತ್ತು ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಂತಿದ್ದ ಸಮಾಜವಾದಿ ಪಕ್ಷದ (ಎಸ್ಪಿ) ಶಾಲಿನಿ ಯಾದವ್ ಅವರನ್ನು ಸೋಲಿಸುವ ಮೂಲಕ 479,505 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.