ರಾಯಚೂರು:- ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಮೂತ್ರ ವಿಸರ್ಜನೆ ವಿಚಾರಕ್ಕೆ ಕಿರಿಕ್ ನಡೆದಿದ್ದು, ಯುವಕರ ಮೇಲೆ ಸ್ಥಳೀಯರು ಮನಸೋ ಇಚ್ಛೆ ಹಲ್ಲೆ ಮಾಡಿದ ಘಟನೆ ಜರುಗಿದೆ.
ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆಯೋದು ಕಷ್ಟ ಆಗ್ತಿದ್ಯಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!
ರಾಡ್, ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆ ನಡೆದಿದೆ. ಗಾಯಾಳು ನೀಡಿರುವ ದೂರಿನನ್ವಯ ದಾದಾ ಪಟೇಲ್, ಫೇರೋಜ್ ಸೇರಿ ನಾಲ್ವರನ್ನ ಲಿಂಗಸುಗೂರು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.
ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಡಿಸೆಂಬರ್ 19 ರ ರಾತ್ರಿ 11 ಗಂಟೆ ಸುಮಾರಿಗೆ ಮಂಜುನಾಥ್, ಅನೀಲ್, ತಿಮ್ಮಣ್ಣ ಸೇರಿ ನಾಲ್ಕೈದು ಹುಡುಗರು ಊಟಕ್ಕೆ ಹೋಗಿದ್ದರು. ಇವರು ಲಿಂಗಸುಗೂರು ಪಟ್ಟಣದ ಪಕ್ಕದಲ್ಲಿರುವ ಕಸಬಾ ಲಿಂಗಸುಗೂರು ಗ್ರಾಮದವರು. ಯಾವುದೋ ಕೆಲಸಕ್ಕೆಂದು ಲಿಂಗಸುಗೂರಿಗೆ ಬಂದಿದ್ದರು. ಇದಾದ ಬಳಿಕ ರಾತ್ರಿ ಊಟಕ್ಕೆಂದು ಮಸ್ಕಿ ರಸ್ತೆಯ ತಳ್ಳುವ ಬಂಡಿ ಬಳಿ ಮಂಜುನಾಥ್ ಆ್ಯಂಡ್ ಸ್ನೇಹಿತರು ಹೋಗಿದ್ದರು.
ಈ ವೇಳೆ ತಿಮ್ಮಣ್ಣ ಅನ್ನೋ ಯುವಕ ತಳ್ಳುವ ಬಂಡಿಯಿದ್ದ ಸ್ವಲ್ಪ ದೂರದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ. ಆಗ ಅಲ್ಲಿದ್ದ ಕೆಲ ಸ್ಥಳೀಯರು ಅಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಅಂತ ಕೆಟ್ಟದಾಗಿ ಬೈದಿದ್ದರಂತೆ. ಆಗ ಮಾತಿಗೆ ಮಾತು ಬೆಳೆದು ದೊಡ್ಡ ಹೊಡೆದಾಟ ನಡೆದು ಹೋಗಿದೆ.
ಸ್ನೇಹಿತ ತಿಮ್ಮಣ್ಣಗೆ ಹೊಡೆಯುತ್ತಿದ್ದಂತೆ ಮಂಜುನಾಥ್, ಸುನೀಲ್ ಹಾಗೂ ಇತರರರು ಪ್ರಶ್ನಿಸಿದ್ದಾರೆ. ಆಗ ಅಲ್ಲಿದ್ದ ಕೆಲವರು ಬೇರೆಯವರನ್ನ ಫೋನ್ ಮಾಡಿ ಕರೆಸಿಕೊಂಡು ರಸ್ತೆಯಲ್ಲಿ ಅಟ್ಟಾಡಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ರಾಡ್, ಚಾಕು, ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಅಂತ ಗಾಯಾಳುಗಳು ಆರೋಪಿಸಿದ್ದಾರೆ.
ಘಟನೆಯಲ್ಲಿ ಮಂಜುನಾಥ್, ಸುನೀಲ್, ತಿಮ್ಮಣ್ಣ ಹಾಗೂ ಅನೀಲ್ಗೆ ಗಾಯಗಳಾಗಿದ್ದು, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿರುವ ಬೆನ್ನಲ್ಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.