ರಾಯಚೂರು:– ಡಾಬಾದಿಂದ ಲೋಕಲ್ ಬ್ರಾಂಡ್ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆಯಾದ ಘಟನೆ ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿ ಜರುಗಿದೆ.
ಲಂಡನ್ನ ಹೋಟೆಲ್ವೊಂದರಲ್ಲಿ ಏರ್ ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ: ತನಿಖೆ ಚುರುಕು!
ಆರೋಪಿಗೆ ಡಾಬಾಕ್ಕೆ ನುಗ್ಗಿ ಲೋಕಲ್ ಬ್ರ್ಯಾಂಡ್ ಎಣ್ಣೆ ಕದಿಯುವ ಚಾಳಿ ಶುರುವಾಗಿತ್ತು. ಅಲ್ಲಿ ಹಣ ಇದ್ದರೂ ಅದನ್ನು ಮುಟ್ಟೇ ಕೇವಲ ಒಟಿ, ಚಾಯ್ಸ್ ಸೇರಿದಂತೆ ಲೋಕಲ್ ಬ್ರಾಂಡ್ನ ಮದ್ಯ ಎತ್ತಿಕೊಂಡು ಪರಾರಿಯಾಗುತ್ತಿದ್ದ. ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿರುವ ಡಾಬಾದ ಮಾಲೀಕರು ಇದರಿಂದ ಬೇಸತ್ತಿದ್ದರು. ಮಾಲೀಕ ಬಸವರಾಜ್ ಅವರು ಆರೋಪಿಯನ್ನು ಹಿಡಿಯುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಆರೋಪಿ ಈ ಬಗ್ಗೆ ಅರಿಯದೇ ಒಳಗೆ ನುಗ್ಗಿ ಮತ್ತೆ ಎಣ್ಣೆಗಾಗಿ ತಡಕಾಡಿದಾಗ ಆತನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆರೋಪಿಯು ಎಣ್ಣೆ ಕದಿಯಲು ಬರುವಾಗ ಡಾಬಾದ ಬಾಗಿಲು ಅಥವಾ ಬೀಗ ಮುರಿಯುತ್ತಿರಲಿಲ್ಲ. ಟಿನ್ ಶೀಟ್ ಹಾಕಿದ್ದ ಡಾಬಾದಲ್ಲಿ ಸಂದಿಯಿಂದ ನುಗ್ಗಿಕೊಂಡು ಬರುತ್ತಿದ್ದ. ಎಣ್ಣೆಯ ಆಸೆ ಶುರುವಾದ ತಕ್ಷಣ ಹಾವಿನಂತೆ ಸಂದಿಯಲ್ಲಿ ನುಗ್ಗಿ ಡಾಬಾಗೆ ಪ್ರವೇಶ ಪಡೆಯುತ್ತಿದ್ದ. ಬಳಿಕ ಅಲ್ಲಿನ ಡ್ರಾಯರ್ಗಳನ್ನು ತೆರೆದು ಎಣ್ಣೆ ತೆಗೆದುಕೊಂಡು ಪರಾರಿಯಾಗುತ್ತಿದ್ದ ಎನ್ನಲಾಗಿದೆ.