ಬೆಂಗಳೂರು/ನವದೆಹಲಿ:- 500 ರೂಪಾಯಿ ನೋಟಿನ ಬಗ್ಗೆ ಅನೇಕರಿಗೆ ಇನ್ನೂ ಅನುಮಾನಗಳಿವೆ. ಇತ್ತೀಚಿಗೆ 500ರ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಕಂಡು ಬರುವುದರಿಂದ ಸಾಕಷ್ಟು ಜನರು ಈ ನೋಟನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಈ ನೋಟು ನಕಲಿಯೋ ಅಸಲಿಯೋ ಎಂಬ ಅನುಮಾನ ಸಾಕಷ್ಟು ಜನರಲ್ಲಿದೆ. ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟರೂ ಕಳ್ಳ ನೋಟು ದಂಧೆ ಮಾತ್ರ ಇನ್ನು ಕೂಡಾ ನಿಂತಿಲ್ಲ. ವಂಚಕರು ತಮ್ಮ ಹೊಸ ಹೊಸ ಮಾರ್ಗಗಳನ್ನು ಅನುಸರಿಸಿಕೊಂಡು ತಮ್ಮ ಕೈ ಚಳಕ ತೋರಿಸುತ್ತಲೇ ಇದ್ದಾರೆ.
ಗೃಹಿಣಿಯರಿಗೆ ಬಿಗ್ ಶಾಕ್: ಈ ಮಹಿಳೆಯರಿಗೆ ಇನ್ನೂ `ಗೃಹಲಕ್ಷ್ಮೀ’ ಹಣ ಸಿಗಲ್ಲ! ಹೆಚ್ಚಿನ ಮಾಹಿತಿ ತಿಳಿಯಿರಿ!
500 ರೂಪಾಯಿ ನೋಟು ಪ್ರಸ್ತುತ ದೇಶದ ಅತೀ ದೊಡ್ಡ ಕರೆನ್ಸಿ ನೋಟಾಗಿದೆ. ಈ ಹಿಂದೆ ದೇಶದಲ್ಲಿ 1000 ಮತ್ತು 2000 ರೂಪಾಯಿ ನೋಟುಗಳು ಚಲಾವಣೆಯಲ್ಲಿತ್ತು. ಆದರೆ, ಸರ್ಕಾರ ಕ್ರಮೇಣ 2016ರಲ್ಲಿ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದುಕೊಂಡಿತ್ತು. ಕ್ರಮೇಣ 2000 ರೂಪಾಯಿ ನೋಟುಗಳನ್ನು ಜಾರಿಗೆ ತಂದಿತ್ತು, ಆದ್ರೆ ಅವುಗಳನ್ನು ಕೂಡ ಹೆಚ್ಚು ದಿನ ಉಳಿಸದೆ ವಾಪಾಸ್ ಪಡೆದುಕೊಂಡಿತು
ಆಗಾಗ ಕೇಂದ್ರ ಸರ್ಕಾರ, ಆರ್ಬಿಐ ಹಣಕಾಸಿನ ಕುರಿತಂತೆ ಅಪ್ಡೇಟ್ ನೀಡುತ್ತಲೇ ಬಂದಿದೆ. ಇದೀಗ ಈ 500 ರೂಪಾಯಿ ನೋಟಿನ ಬಗ್ಗೆ ಆರ್ಬಿಐ ದೊಡ್ಡ ಸುದ್ದಿಯೊಂದನ್ನು ನೀಡಿದೆ. ಇದರ ಬಗ್ಗೆ ದೇಶದ ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳುವ ಅವಶ್ಯಕತೆ ಇದೆ
ಭಾರತದಲ್ಲಿ 2000 ರೂಪಾಯಿ ನೋಟಿನ ನಂತರ 500 ರೂಪಾಯಿ ನೋಟು ಅತಿ ದೊಡ್ಡ ಮುಖಬೆಲೆಯ ನೋಟಾಗಿದೆ. 500 ರೂಪಾಯಿ ನೋಟು ಅತಿ ದೊಡ್ಡ ಮುಖಬೆಲೆಯ ನೋಟು ಆಗಿರುವುದರಿಂದ ಮೌಲ್ಯ ಹೆಚ್ಚಾಗಿರುವುದರಿಂದ ಈ ನೋಟು ಅಸಲಿಯೇ, ನಖಲಿಯೇ ಎಂಬ ಚರ್ಚೆ ಆಗಾಗ ನಡೆಯುತ್ತಿರುತ್ತದೆ.
ಅವುಗಳಲ್ಲಿ, ಮಾರುಕಟ್ಟೆಯಲ್ಲಿ ನಕ್ಷತ್ರ ಚಿಹ್ನೆ (*) ಹೊಂದಿರುವ 500 ರೂಪಾಯಿ ನೋಟಿನ ಒಂದು ವಿಧವಿದೆ. ಈ ರೀತಿಯ 500 ರೂಪಾಯಿ ನೋಟುಗಳು ಬಹಳ ಅಪರೂಪ, ಆದರೆ ಮಾರುಕಟ್ಟೆಯಲ್ಲಿ ಅಂತಹ ನೋಟುಗಳು ನಕಲಿ ಎಂದು ಕಾಲಕಾಲಕ್ಕೆ ವರದಿಯಾಗುತ್ತಿರುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಈಗ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ.
500 ರೂಪಾಯಿ ನೋಟಿನಲ್ಲಿ ನಕ್ಷತ್ರ (*) ಚಿಹ್ನೆ ಇದ್ದ ಮಾತ್ರಕ್ಕೆ ಅದು ನಕಲಿ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.