ಚಾಮರಾಜನಗರ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲಿಂಗಾಯತ ಮತಗಳನ್ನು ಸೆಳೆಯುತ್ತಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಲಿಂಗಾಯತರು ಮೊದಲಿಂದಲೂ ಹೆಚ್ಚು ಬಿಜೆಪಿ ಪರ ಇದ್ದಾರೆ. ಅದೇನು ಹೊಸದಲ್ಲ ಎಂದಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಲಿಂಗಾಯತರು ಮೊದಲಿಂದಲೂ ಹೆಚ್ಚು ಬಿಜೆಪಿ ಪರ ಇದ್ದಾರೆ. ನಮ್ಮ ಜತೆ ಇರುವವರು ಇದ್ದಾರೆ. ಅವರು ಬಂದ ತಕ್ಷಣ ಏನು ವ್ಯತ್ಯಾಸ ಆಗಲ್ಲ ಎಂದು ಹೇಳಿದ್ದಾರೆ.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಬಿಜೆಪಿಯವರ ಜತೆ ಹೆಚ್ಚಿನ ಲಿಂಗಾಯತರು ಇದ್ದಾರೆ ಅಷ್ಟೇ. ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮುಂದೆ ಹೆಚ್ಚಿನ ಹೋರಾಟಗಳಿವೆ. ಆ ಎಲ್ಲ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದು ಅವರಿಗೆ ಆ ಸ್ಥಾನ ಕೊಟ್ಟಿದ್ದಾರೆ. ನೋಡೋಣ, ಮುಂದೆ ಲೋಕಸಭಾ ಚುನಾವಣೆ ಇದೆ. ಅದಾದ ಮೇಲೆ ಫೈನಲ್ ಮ್ಯಾಚ್, 2028 ರ ವಿಧಾನಸಭಾ ಚುನಾವಣೆ ಇದೆ. ಅವರು ಯಾವ ರೀತಿ ಸಂಘಟನೆ ಮಾಡ್ತಾರೆ, ಪಕ್ಷ ಯಾವರೀತಿ ಸಹಕಾರ ನೀಡುತ್ತಾರೆ ಕಾದು ನೋಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.