ಕಲಘಟಗಿ( ಧಾರವಾಡ) : ಪಟ್ಟಣದ ಶ್ರೀ ಗುರು ಸೋಮಲಿಂಗೇಶ್ವರ ಅಜ್ಜನವರ 44ನೇ ಪುಣ್ಯರಾಧನೆ
ಅ.2 ರಂದು ಹಮ್ಮಿಕೊಳ್ಳಲಾಗಿದೆ ಎಂದುಪರಮಾನಂದ ಒಡೆಯರ್ ಹೇಳಿದರು.
ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಸಕಲ ಸದ್ಭಕ್ತರಲ್ಲಿ ತಿಳಿಸುವುದೇನೆಂದರೆ, ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸೋಮಲಿಂಗೇಶ್ವರ ಅಜ್ಜನವರ ಮೂರ್ತಿಗೆ ರುದ್ರಾಭಿಷೇಕ, ಚಂಡಿಕಾ ಹೋಮ, ಮೆರವಣಿಗೆಗೆ ಚಾಲನೆ ಹಾಗೂ ಬೆಳಗ್ಗೆ ಭಾವಚಿತ್ರ ಮೆರವಣಿಗೆ ಮುಖಾಂತರ ಕುಂಭಮೇಳದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮುಖಾಂತರ ಸಂಚರಿಸಿ ವೇದಿಕೆಗೆ ಆಗಮಿಸುವುದು. ಅನ್ನಪ್ರಸಾದ ಜರುಗುವುದು ಮಧ್ಯಾಹ್ನ 2:30ಕ್ಕೆ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 101 ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಲಾಗುವುದು.
ದಿವ್ಯ ಸಾನಿಧ್ಯ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹನ್ನೆರಡು ಮಠ, ಕಲಘಟಗಿ. ಶ್ರೀ ಪ ಪೂ, ಸೋಮೇಶ್ವರ ಮಹಾ ಸ್ವಾಮೀಜಿ, ಗುರು ಪೀಠ ಮಕಣಪುರ್, ಉದ್ಘಾಟನೆಗೆ ಮಾನ್ಯ ಸಂತೋಷ ಲಾಡ್ ಶಾಸಕರು ಹಾಗೂ ಕಾರ್ಮಿಕ ಸಚಿವರು, ಹಾಗೂ ಸಿಟಿ. ಗುರುಪ್ರಸಾದ್ ಕುಲಸಚಿವರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ರಾಜು ತಾಳಿಕೋಟಿ ನಿರ್ದೇಶಕರು ಧಾರವಾಡ ರಂಗಾಯಣ, ಆಗಮಿಸುವರು ಸಂಜೆ ಸಂಸ್ಕೃತಿಕ ಕಾರ್ಯಕ್ರಮಗಳು ನೆರವೇರುವವರು ಎಂದು ಪರಮಾನಂದ ಒಡೆಯರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಸವರಾಜ್ ತಿಪ್ಪಣ್ಣವರ, ಅನಿಲ್ ಲೋಕರೆ, ಮೃತ್ಯುಂಜಯ ಅಗಸಿಮನೆ, ಗಂಗಯ್ಯ ಹಿರೇಮಠ, ಬಸವರಾಜ್ ಶೆರೇವಾಡ, ಚನ್ನಬಸಯ್ಯ ಚಿಕ್ಕಮಠ್, ಎಸ್ ಆರ್ ಬದ್ರಿ, ಉಪಸ್ಥಿತರಿದ್ದರು,