ಬೀಚ್ನಲ್ಲಿ ಸಂತೋಷವಾಗಿ ಆಟವಾಡುತ್ತಿದ್ದ ಮೂವರ ಮಕ್ಕಳ ಮೇಲೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದೆ. ಈ ಆಘಾತಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Mandya: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕ್ಷಣಗಣನೆ.. ಜಿಲ್ಲಾಡಳಿತದಿಂದ ಮತದಾನಕ್ಕೆ ಸಕಲ ಸಿದ್ದತೆ!
ಈ ಆಘಾತಕಾರಿ ಘಟನೆ ಅಮೇರಿಕಾದಲ್ಲಿ ನಡೆದಿದ್ದು, ಇಲ್ಲಿನ ಪೋರ್ಟೊ ರಿಕೊ ಕಡಲತೀರದಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಸಿಡಿಲು ಬಡಿದಿದ್ದು, ಪರಿಣಾಮ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳಲ್ಲಿ ಒಂದು ಮಗು 7 ವರ್ಷ, ಇನ್ನೊಂದು ಮಗು 10 ವರ್ಷ, ಮೂರನೇ ಮಗು 12 ವರ್ಷ ವಯಸ್ಸಿನದ್ದು ಎಂದು ಗುರುತಿಸಲಾಗಿದೆ. ಈ ಮೂರು ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅದರಲ್ಲಿ 12 ವರ್ಷದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳಿವೆ.