ಬೆಂಗಳೂರು: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜಧಾನಿಯಲ್ಲಿ ನಡೆದಿರೋ ಕಂಬಳ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು. ಲಕ್ಷಾಂತರ ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಎರಡನೇ ದಿನವೂ ಬೆಂದುಕಾಳೂರಿನಲ್ಲಿ ಬೇಯಿಸಿ, ರುಬ್ಬಿದ ಹುರಳಿ ಕಾಳು ತಿಂದು ಕೆರೆ ಗಿಳಿದ ಜೋಡಿ ಕೋಣಗಳು ಮಿಂಚಿನ ಓಡ ನಡೆಸಿದ್ದವು. ಹಾಗಾದ್ರೆ ಕೊನೆಯ ದಿನದ ಕೋಣಗಳ ಮಿಂಚಿನ ಓಟ ಹೇಗಿತ್ತು ಬನ್ನೋ ತೋರಿಸ್ತೀವಿ ‘
ಕಂಬಳ ಅಂದರೆ ನೆನಪಾಗೋದು ಕರಾವಳಿಯ ಮಂಗಳೂರು, ಉಡುಪಿ. ಆದ್ರೆ ಇನ್ಮುಂದೆ ಕಂಬಳ ಅಂದ್ರೆ ಕಣ್ಮಂದೆ ಬರೋದು ಬೆಂಗಳೂರು. ಹೌದು ಕರಾವಳಿ ಆಚರಣೆಯ ಕಂಬಳ ಫಸ್ಟ್ ಟೈ ಬೆಂಗಳೂರಿನಲ್ಲಿ ನಿನ್ನೆ ಇಂದು ಅಂದರೆ ಎರಡು ದಿನ ನಡೆದಿದೆ. 150 ಹೆಚ್ಚು ಜೋಡಿ ಕೋಣಗಳು ಕೆಸರಗದ್ದೆಯಲ್ಲಿ ನಾನಾ ನೀನಾ ಅಂತ ಸ್ವರ್ಧೆಗೆ ಬಿದ್ದದ್ವು. ಈ ಕೋಣಗಳನ್ನ ನೋಡೋಕೆ ಸಿಕ್ಕಾಪಟ್ಟೆ ತ್ರಿಲ್ ಆಗಿತ್ತು.ಕರಾವಳಿಗರ ಕಂಬಳ ಕಿಕ್ ಕೊಡೋಕೆ ಕಾರಣ ರಿಷಬ್ ಶೆಟ್ಟಿಯ ಕಾಂತರ ಸಿನಿಮಾ. ಕಾಂತರದಲ್ಲಿ ಕಾಡುಬೆಟ್ಟದ ಶಿವ ಕಂಬಳ ಪಟ್ಟುವಾಗಿದ್ದು, ಶೆಟ್ರು ಕಂಬಳ ಮಾಡಿದ್ದನ್ನ ನೋಡಿ ಪ್ರೇಕ್ಷಕರು ವಾವ್ಹಾ ಅಂದಿದ್ರು. ಅಲ್ಲಿಂದ ಕಂಬಳದ ಕ್ರೇಜ್ ಹೆಚ್ಚಾಯಿತು. ಇದರ ಫಲ ಕಂಬಳ ಬೆಂಗಳೂರಿಗೆ ಶಿಫ್ಟ್ ಆಗಿ, ಎರಡು ದಿನ ಅದ್ದೂರಿ ಕಂಬಳ ಮೇಳ ನಡೆಯಿತು
ಹೌದು..ವೀಕೆಂಟ್ ನಲ್ಲಿ ನಡೆದ ಕಂಬಳ ಮೇಳಕ್ಕೆ ಸಖತ್ ರೆಸ್ಪಾನ್ಸ್ ಸಿಕ್ತು.. ತುಳುನಾಡಿನ ಗಂಡು ಕಲೆಯನ್ನ ಕಣ್ತುಂಬಿಕೊಳ್ಳಲು ಕಾದಿದ್ದ ಜನರಿಗೆ ವೀಕೆಂಡ್ನಲ್ಲಿ ಸಖತ್ ಮನರಂಜನೆ ನೀಡ್ತು. ಇತಿಹಾಸದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆದಿರೋ ಈ ಕಂಬಳಕ್ಕೆ ಜನ ಬಹುಪರಾಕ್ ಅಂದರು. ಇಂದು ಬೆಳಗ್ಗೆಯಿಂದ ಕಂಬಳದ ಕೆರೆಯಲ್ಲಿ ಕೋಣಗಳ ಕಂಬಳ ಓಟ ಶುರುವಾಯಿತು. ಹಗ್ಗದ ಓಟ. ನೇಗುಲು ಓಟ, ಅಡ್ಡ ಹಲಗೆ, ಕಣೆ ಹಲಗೆ ಓಟಗಳು ರೋಮಾಂಚಗೊಳಿಸಿದವು. ಕೋಣಗಳೊಂದಿಗೆ ಹಗ್ಗ, ನೇಗಿಲು ಹಿಡಿದುಕೊಂಡು ಶರವೇಗದಲ್ಲಿ ಓಡುವ ಓಡಗಾರರು ನೋಡುಗರನ್ನ ಬೆರಗು ಮೂಡಿಸಿದರು.ಇಂದು ಕೊನೆ ದಿನವಾದರಿಂದ ಕಂಬಳ ನೋಡಲು ಜನಸ್ತೋಮ ಹರಿದುಬಂದಿತ್ತು.
ವೀಕೆಂಡ್ನಲ್ಲಿ ಕರಾವಳಿಯ ಗಂಡು ಕಲೆ ಕಂಬಳವನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಸಿಲಿಕಾನ್ ಸಿಟಿ ಜನರಿಗೆ ಸಖತ್ ಮನರಂಜನೆ ನೀಡ್ತು. ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರಲ್ಲಿ ನಡೆದ ಕಂಬಳದ ಎರಡನೇ ದಿನದ ಝಲಕ್ ಅದ್ಭುತವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ತುಳುನಾಡಿನ ಕೋಣದ ಓಟದ ಸ್ಪರ್ಧೆಯನ್ನು ನೋಡಿ ಫುಲ್ ಫಿದಾ ಆಗಿದ್ದರು. ಕಂಬಳದ ಕೌತುಕ ಕ್ಷಣಗಳನ್ನ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಕರಾವಳಿ ಭಾಗದ ಸಾಕಷ್ಟು ಕಂಬಳಾಭಿಮಾನಿಗಳು ಈ ವೇಳೆ ಭಾಗಿಯಾಗಿದ್ದರು. ಕೊನೆಯ ದಿನದ ಕಂಬಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು. ಸಿಟಿ ಮಂದಿಯಂತೂ ಹಳ್ಳಿ ಸೊಗಡಿನ ಹಬ್ಬಕ್ಕೆ ಮಾರು ಹೋಗಿ ಸಖತ್ ಎಂಜಾಯ್ ಮಾಡಿದ್ದರು.ಒಟ್ಟಿನಲ್ಲಿ ಕರಾವಳಿಯ ಜಾಮಪದ ಆಟ ಕಂಬಳ ನೋಡೋದೇ ಕಣ್ಣಿಗೊಂದು ಹಬ್ಬ.ಅಂತಹದ್ದರಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ನಡೆದು ಇತಿಹಾಸ ಸೃಷ್ಟಿಯಾಗಿದೆ. ಇದೇ ರೀತಿ ಇನ್ಮೇಲೆ ವರ್ಷಕ್ಕೊಮ್ಮೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ನಡೆಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.