ಚಿಕ್ಕಮಗಳೂರು:- ಅನಾಮಧೇಯ ವ್ಯಕ್ತಿಗಳಿಂದ ಜೀವ ಬೆದರಿಕೆ ಬಂದಿರುವ ವಿಚಾರವಾಗಿ CT ರವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
BY Vijayendra: ಸಿ.ಟಿ.ರವಿ ಹಾಗೂ ಪುತ್ರನಿಗೆ ಜೀವ ಬೆದರಿಕೆ ಬರುತ್ತಿದೆ: BY ವಿಜಯೇಂದ್ರ!
ಈ ಸಂಬಂಧ ಮಾತನಾಡಿದ ಅವರು, ಈ ಎಲ್ಲಾ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನಮ್ಮ ಆಯಸ್ಸು ಬರೆಯುವವನು ಭಗವಂತ. ಆ ಬೆದರಿಕೆಯನ್ನು ನಾನು ಗಂಭೀರವಾಗಿ ತೆಗೆದುಕೊಂಡಿಲ್ಲ. ತನಿಖೆಯಾಗಬೇಕು, ನಿರ್ಲಕ್ಷವಾಗಬಾರದು ಎಂದಿದ್ದಾರೆ.
ನಾನು ವಿಜಯಪುರ ಪ್ರವಾಸದಲ್ಲಿದ್ದಾಗ ಕಾರ್ಯಾಲಯಕ್ಕೆ ಪತ್ರ ಬಂದಿದೆ ಎಂದು ಸಿಬ್ಬಂದಿಗಳು ತಿಳಿಸಿದರು. ಕಚೇರಿಯಿಂದ ಪತ್ರವನ್ನು ವಾಟ್ಸಪ್ ಮೂಲಕ ತರಿಸಿಕೊಂಡೆ. ತಕ್ಷಣ ಎಸ್ಪಿ ಅವರಿಗೆ ಫಾರ್ವರ್ಡ್ ಮಾಡಿ, ಕಾರ್ಯಾಲಯದಿಂದ ದೂರು ಸಲ್ಲಿಸಲು ತಿಳಿಸಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ಎಸ್ಪಿಯವರು ಈಗಾಗಲೇ ತಂಡ ರಚನೆ ಮಾಡಿ, ಎಲ್ಲಿಂದ ಪೋಸ್ಟ್ ಮಾಡಿದ್ದಾರೆ, ಯಾರ್ಯಾರು ಹೋಗಿದ್ದಾರೆ. ಸಿಸಿಟಿವಿ ನೋಡಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ ಎಂದರು.
ಅಧಿಕಾರ ಕೊಡುವವನು ಭಗವಂತ. ಜನರ ಮೂಲಕ ಅಧಿಕಾರ ಕೊಡಬೇಕು ಅಂದರೆ ಭಗವಂತನೇ ಕೊಡುತ್ತಾನೆ. ಬೆದರಿಕೆಯನ್ನ 35-40 ವರ್ಷದಿಂದಲೂ ಕೇಳಿಕೊಂಡೆ ಬಂದಿದ್ದೇನೆ. ಆ ಬೆದರಿಕೆಗಳಿಗೆ ಹೆದರಿ ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ಆಗಲ್ಲ ಎಂದಿದ್ದಾರೆ.