ನಿನ್ನ ಪಕ್ಕದಲ್ಲೇ ಇದ್ದೇವೆ ನಿನ್ನನ್ನು ಬಿಡುವುದಿಲ್ಲ ಸಾಯಿಸಿಯೇ ತಿರುತ್ತೇವೆ ಎಂದು ಕಿಡಿಗೇಡಿಗಳು ಆಂಧ್ರಪ್ರದೇಶ DCMಗೆ ಬೆದರಿಕೆ ಕರೆ ಮಾಡಿರುವ ಘಟನೆ ಜರುಗಿದೆ.
ಪಾಲಿಕೆಯ ಅನುದಾನ ತಾರತಮ್ಯ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ..!
ಆಂಧ್ರಪ್ರದೇಶದ ಡಿಸಿಎಂ ನಟ ಪವನ್ ಕಲ್ಯಾಣ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದ್ದು, ಡಿಸಿಎಂ ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ ಕಿಡಿಗೇಡಿಗಳು ಬೆದರಿಕೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಆಕ್ಷೇಪಾರ್ಹ ಭಾಷೆಯಲ್ಲಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿಲಾಗಿದೆ. ಅಷ್ಟೇ ಅಲ್ಲ ಪವನ್ ಕಲ್ಯಾಣ್ ಅವರನ್ನು ಸಾಯಿಸುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪವನ್ ಕಲ್ಯಾಣ್ ಅವರನ್ನು ಕೊಲ್ಲುತ್ತೇವೆ, ಅವರ ಪಕ್ಕದಲ್ಲೇ ಇದ್ದೇವೆ ಎಂದು ಬೆದರಿಕೆ ಕರೆಗಳು ಬಂದಿವೆ. ಜತೆಗೆ ಪವನ್ ಅವರಿಗೆ ಅಸಭ್ಯ ಭಾಷೆಯಲ್ಲಿ ನಿಂದಿಸಲಾಗಿದೆ. ಈ ಕೂಡಲೇ ಆತಂಕಕ್ಕೆ ಒಳಗಾದ ಕಚೇರಿ ಸಿಬ್ಬಂದಿ ವಿಷಯವನ್ನು ಪವನ್ ಕಲ್ಯಾಣ್ ಗಮನಕ್ಕೆ ತಂದಿದ್ದಾರೆ.
ಇನ್ನು, ಉನ್ನತ ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕಿದ್ಯಾರು? ಎಂದು ತನಿಖೆ ನಡೆಸುತ್ತಿದ್ದಾರೆ.