ಬಾಗಲಕೋಟೆ: ಮಠಕ್ಕೆ ಕಳಿಸಿದಂತೆ ರಾಜ್ಯದ ಎಲ್ಲ ಮಸೀದಿ, ಚರ್ಚ್’ಗಳಿಗೆ ಕಳಿಸಿ ನೋಡೋಣ ಎಂದು ಶ್ರೀರಾಮಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದಗಂಗಾ ಮಠಕ್ಕೆ ಬಿಲ್ ನೋಟಿಸ್ ವಿಚಾರವಾಗಿ ಬಾಗಲಕೋಟೆ ಯಲ್ಲಿ ಮಾತನಾಡಿದ ಅವರು, ಸರ್ಕಾರ ಮಾಡದಷ್ಟು ಸೇವೆಯನ್ನು ಶಿಕ್ಷಣ, ವಸತಿ ಸೇವೆಯನ್ನು 30-40 ವರ್ಷಗಳಿಂದ ಮಠ ಮಾಡುತ್ತಾ ಬಂದಿದೆ.
Supreme Court Recruitment: ಸುಪ್ರೀಂ ಕೋರ್ಟ್ʼನಲ್ಲಿದೆ ಉದ್ಯೋಗಾವಕಾಶ! ಆಸಕ್ತರು ಇವತ್ತೇ ಅಪ್ಲೈ ಮಾಡಿ
ಲಕ್ಷಾಂತರ ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಊಟ ಒದಗಿಸುತ್ತಿದೆ. ಮಠಕ್ಕೆ ಕಳಿಸಿದಂತೆ ರಾಜ್ಯದ ಎಲ್ಲ ಮಸೀದಿ, ಚರ್ಚ್ಗಳಿಗೆ ಕಳಿಸಿ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ, ಅವರಿಗೊಂದು ಕಾನೂನು, ಹಿಂದೂಗಳಿಗೊಂದು ಕಾನೂನು. ನಾವಿದನ್ನು ಕ್ಷಮಿಸುವುದಿಲ್ಲ ಮಠಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.