ಅಂತಾರಾಷ್ಟ್ರೀಯ ಕ್ರಿಕೆಟ್ಗೆ 2023ರಲ್ಲಿ ನಿವೃತ್ತಿ ಘೋಷಿಸಿದ ಮೊದಲ ಆಟಗಾರ ದಕ್ಷಿಣ ಆಫ್ರಿಕಾ ತಂಡದ ಆಲ್ರೌಂಡರ್ ಡ್ವೇಯ್ನ್ ಪ್ರಿಟೋರಿಯಸ್. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುವ ಟಿ20 ಲೀಗ್ಗಳಲ್ಲಿ ಆಡುವುದಕ್ಕೆ ಆದ್ಯತೆ ನೀಡಿದ ಡ್ವೇಯ್ನ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ವೃತ್ತಿಬದುಕನ್ನು ಅಂತ್ಯಗೊಳಿಸಿದರು. ಹರಿಣಗಳ ಪರ ಡ್ವೇಯ್ನ್ ಪ್ರಿಟೋರಿಯಸ್ 30 ಟಿ20-ಐ, 27 ಒಡಿಐ ಮತ್ತು 3 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಅಂದಹಾಗೆ 2023ರಲ್ಲಿ ನಿವೃತ್ತಿ ಘೋಷಿಸಿದ 5 ಸ್ಟಾರ್ ಆಟಗಾರರ ವಿವರವನ್ನು ಇಲ್ಲಿ ನೀಡಲಾಗಿದೆ.
01. ಹಶೀಮ್ ಆಮ್ಲಾ
2023ರ ಸಾಲಿನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆಯೋಜನೆ ಆಗಲಿದೆ ಎಂಬುದು ಗೊತ್ತಿದ್ದರೂ ಕೂಡ ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆರಂಭಿಕ ಬ್ಯಾಟರ್ ಹಶೀಮ್ ಆಮ್ಲಾ ಹಠಾತ್ ನಿವೃತ್ತಿ ಘೋಷಿಸಿದರು.
02. ಆರೊನ್ ಫಿಂಚ್
ವೈಟ್ಬಾಲ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ತಂಡದ ಪರ ದೀರ್ಘ ಕಾಲದವರೆಗೆ ಆಡಿರುವ ಮಾಜಿ ನಾಯಕ ಆರೊನ್ ಫಿಂಚ್, ತಮ್ಮ ವೈಭವಯುತ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ 2023ರ ಫೆಬ್ರವರಿಯಲ್ಲಿ ನಿವೃತ್ತಿ ಘೋಷಿಸಿದರು
03. ಜೋಗಿಂದರ್ ಶರ್ಮಾ
ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆದ 2007ರ ಸಾಲಿನ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಹೀರೋ ಆದ ಮಧ್ಯಮ ವೇಗದ ಬೌಲರ್ ಜೋಗಿಂದರ್ ಶರ್ಮಾ, 2023ರಲ್ಲಿ ನಿವೃತ್ತಿ ಘೋಷಿಸಿದರು.
04. ಮುರಳಿ ವಿಜಯ್
ಮಾಂಕ್ ಎಂದೇ ಖ್ಯಾತಿ ಪಡೆದಿದ್ದ ಅನುಭವಿ ಆರಂಭಿಕ ಬ್ಯಾಟರ್ ಮುರಳಿ ವಿಜಯ್ ಕೂಡ 2023ರ ಫೆಬ್ರವರಿಯಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದರು
05. ಅಂಬಾಟಿ ರಾಯುಡು
2019ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ಗೆ ಆಯ್ಕೆಯಾಗದ ಬೇಸರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಸ್ಟಾರ್ ಬ್ಯಾಟರ್ ಅಂಬಾಟಿ ರಾಯುಡು