ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಐಸಿಸಿ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿರುವ ಭಾರತ, ಸದ್ಯ ಹೈ ಜೋಶ್ನಲ್ಲಿದೆ. ತಂಡದ ಆಟಗಾರರು ಇನ್ನು ಬಾರ್ಬಡೋಸ್ನಲ್ಲಿ ಇದ್ದು, ಮೋಜಿನಲ್ಲಿ ತೊಡಿಗಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರಿಗೆ ಕೆಲ ಕಿವಿಮಾತುಗಳನ್ನು ಹೇಳುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ಅಂಗಳದಲ್ಲಿ ನಾನ್ಯಾಕೆ ಮಲಗಿದ್ದೆ ಎಂಬುದರ ಬಗ್ಗೆ ರಿವೀಲ್ ಮಾಡಿದ ರೋಹಿತ್ ಶರ್ಮಾ!
ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಟೀಮ್ ಇಂಡಿಯಾ ಪ್ರತಿ ಸದಸ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಗುಣಗಾನ ಮಾಡಿದರು. ರಾಹುಲ್ ದ್ರಾವಿಡ್ ಕಾರ್ಯವನ್ನು ಸ್ಮರಿಸಿದರು. ಅಲ್ಲದೆ ದ್ರಾವಿಡ್ ಅವರನ್ನು ಎಲ್ಲ ಆಟಗಾರರು ಸೇರಿ ಗಾಳಿಯಲ್ಲಿ ತೂರಿ ತಮ್ಮ ಧನ್ಯತೆ ಮೆರೆದರು. ದ್ರಾವಿಡ್ ತಮ್ಮ ವಿದಾಯ ಭಾಷಣವನ್ನು ಮಾಡಿದ್ದಾರೆ.
ರಾಹುಲ್ ದ್ರಾವಿಡ್ ತಮ್ಮ ವಿದಾಯ ಭಾಷಣದಲ್ಲಿ ತುಂಬಾ ಭಾವುಕರಾಗಿದ್ದರು. ಈ ಭಾವುಕತೆಯೊಂದಿಗೆ ಮಾತನಾಡಿದ ಟೀಮ್ ಇಂಡಿಯಾ ಕೋಚ್, ವೃತ್ತಿಜೀವನದ ಕೊನೆಯಲ್ಲಿ, ಯಾವುದೇ ರನ್ ಅಥವಾ ದಾಖಲೆಗಳನ್ನು ನೆನಪಿರುವುದಿಲ್ಲ. ಬದಲಾಗಿ ಇಂತಹ ಕ್ಷಣಗಳು ಮಾತ್ರ ನೆನಪಿನಲ್ಲಿ ಉಳಿಯುತ್ತವೆ. ಹೀಗಾಗಿ ಈ ಗೆಲುವನ್ನು ಪೂರ್ಣವಾಗಿ ಆನಂದಿಸಬೇಕೆಂದು
ಟೀಮ್ ಇಂಡಿಯಾವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ದ್ರಾವಿಡ್, ಈ ಟ್ರೋಫಿಗಾಗಿ ಎಲ್ಲರ ಕುಟುಂಬವು ಸಾಕಷ್ಟು ಹೋರಾಟ ಮಾಡಿದೆ. ಅವರ ಕೊಡುಗೆಗಳಿಗೆ ಸಮರ್ಪಣ ಪದಗಳಿಲ್ಲ. ಅಂತಿಮವಾಗಿ ಅವರೆಲ್ಲರಿಗೂ ಅಮೂಲ್ಯ ಕೊಡುಗೆ ನೀಡಿದ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದರು.
Rahul Dravid: ವಿಶ್ವಕಪ್ ಸೋತು ಕಣ್ಣೀರಿಟ್ಟಿದ್ದ ನೆಲದಲ್ಲೇ ವಿಶ್ವಕಪ್ ಎತ್ತಿ ಹಿಡಿದ ರಾಹುಲ್ ದ್ರಾವಿಡ್
ಈ ವೇಳೆ ದ್ರಾವಿಡ್ ಕೂಡ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿ ಧನ್ಯವಾದ ತಿಳಿಸಿದರು. ರೋಹಿತ್ ನನಗೆ ಕರೆ ಮಾಡಿ 2024ರ ಟಿ20 ವಿಶ್ವಕಪ್ ವರೆಗೂ ಕೋಚ್ ಆಗಿರುವಂತೆ ಕೇಳಿಕೊಂಡಿದ್ದರು. ಅಂದು ನನಗೆ ಮನವಿ ಮಾಡಿ, ತಂಡದ ಕೋಚ್ ಆಗಿ ಮುಂದುವರೆಯುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದರು.
ಈ ಗೆಲುವನ್ನು ವರ್ಣಿಸಲು ನನ್ನ ಪದಗಳಿಲ್ಲ. ನಾನು ವಿಶ್ವ ವಿಜೇತ ತಂಡದ ಭಾಗವಾಗಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ. ಪ್ರತಿಯೊಬ್ಬ ಆಟಗಾರ ಈ ಕ್ಷಣವನ್ನು ತನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ನೀವು ಈ ಟೂರ್ನಿಯಲ್ಲಿ ಹೇಗೆ ಆಡಿದ್ದೀರಿ ಎಂಬುದಕ್ಕಿಂತ ಹೆಚ್ಚಾಗಿ, ಈ ತಂಡದ ಭಾಗವಾಗಿದ್ದಿರಿ ಎಂದು ನೀವು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೀರಿ ಎಂದು ರಾಹುಲ್ ದ್ರಾವಿಡ್ ಟ್ವಿಟರ್ನಲ್ಲಿ ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
ಅಂತ್ಯದಲ್ಲಿ ರಾಹುಲ್ ದ್ರಾವಿಡ್ ಎಲ್ಲಾ ಆಟಗಾರರನ್ನು ತಂಡವಾಗಿ ಒಗ್ಗಟ್ಟಿನಿಂದ ಇರುವಂತೆ ಕೇಳಿಕೊಂಡರು. ಈ ಗೆಲುವು ಯಾವುದೇ ಒಬ್ಬ ವ್ಯಕ್ತಿಯ ಗೆಲುವಲ್ಲ. ಇಡೀ ತಂಡ ಒಟ್ಟಾಗಿ ಈ ಯಶಸ್ಸನ್ನು ಸಾಧಿಸಿದೆ. ಆದ್ದರಿಂದ ಯಾವಾಗಲೂ ತಂಡವಾಗಿ ಆಡಬೇಕು ಎಂದು ಕಿವಿಮಾತು ಹೇಳಿದರು.