ಬೆಂಗಳೂರು:- ನನ್ನ ವಿರುದ್ಧ ಸಂಚು ಮಾಡಿದವರ ವಿರುದ್ಧ ನ್ಯಾಯಾಂಗ ತನಿಖೆ ಆಗಲಿ ಎಂದು CT ರವಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪೊಲೀಸರಿಗೆ ಪದೇ ಪದೇ ಸೂಚನೆ ಬರುತ್ತಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಡಿಕೆ ಶಿವಕುಮಾರ್ ಅಥವಾ ಯಾರು ನನ್ನ ವಿರುದ್ಧ ಸಂಚು ಮಾಡಿದ್ದಾರೆ ಎನ್ನುವುದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದರು.
ವಾಕಿಟಾಕಿ ಮೂಲಕ ಸೂಚನೆ ಬಂದರೆ ಉಳಿದೆಲ್ಲವೂ ಫೋನ್ ಮೂಲಕ ಸೂಚನೆ ಬರುತ್ತಿತ್ತು. ಪೊಲೀಸರ ಬಳಿ ಎರಡು, ಮೂರು ಫೋನ್ಗಳಿದ್ದವು. ಹಿರಿಯ ಅಧಿಕಾರಿಗಳು ಅಥವಾ ಮಂತ್ರಿಯಿಂದ ನಿರಂತರ ಫೋನ್ ಬರುತ್ತಿತ್ತು ಎಂದು ಹೇಳಿದರು
ಪೊಲೀಸರ ವೈಯಕ್ತಿಕ, ಇಲಾಖೆ ಫೋನ್ಗಳ ಕಾಲ್ ರೆಕಾರ್ಡ್, ಜಿಪಿಎಸ್ ಟ್ರ್ಯಾಕ್ ಮಾಡಿ ತನಿಖೆ ಆಗಬೇಕು. ಪೊಲೀಸರು ಸರ್ ಸರ್ ಅಂತ ಮಾತನಾಡುತ್ತಿದ್ದರು. ಅವರ ಭಾವ ಭಂಗಿ ನೋಡಿದರೆ ಕರೆ ಮಾಡುತ್ತಿರುವ ವ್ಯಕ್ತಿ ಹಿರಿಯ ಅಧಿಕಾರಿ ಇದ್ದಿರಬಹುದು ಅಥವಾ ಮಂತ್ರಿಯೂ ಇರಬಹುದು. ನಾನು ಕ್ರಿಮಿನಲ್ ಅಲ್ಲ, ಯಾಕೆ ಹೀಗೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.