ಹುಬ್ಬಳ್ಳಿ: ಕಳಸಾ ಬಂಡೂರಿ, ಮಹದಾಯಿ ಸೇರಿದಂತೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿರುವ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ, ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
Hubballi: ನಾಳೆ ಶ್ರೀ ಸಿದ್ಧಾರೂಢರ ಸಮಕಾಲೀನ ಮಹಾತ್ಮರ ಸಂಗಮ ರಥಯಾತ್ರೆ ಮಂಗಳ ಕಾರ್ಯಕ್ರಮ!
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಮಿತಿ ಸಂಚಾಲಕ ಸಿದ್ದಣ್ಣ ತೇಜಿ, ಹಗರಣಗಳ ಚರ್ಚೆ ನೆಪದಲ್ಲಿ ಅಧಿವೇಶನದ ಸಮಯ ವ್ಯರ್ಥ ಮಾಡಬಾರದು ಎಂದು ಆಗ್ರಹಿಸಿದರು. ಉತ್ತರ ಕರ್ನಾಟಕದ ನೀರಾವರಿ ಯೋಜನೆ, ಅನುದಾನ ತಾರತಮ್ಯ, ಉದ್ಯೋಗ ಹಾಗೂ ಮತ್ತಿತರ ವಿಷಯಗಳನ್ನು ಗಂಭೀವಾಗಿ ರ್ಚಚಿಸಬೇಕು.
ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬೆಳಗಾವಿ ಅಧಿವೇಶನ ನಡೆಸುತ್ತಿರುವ ಉದ್ದೇಶ ಈಡೇರಬೇಕು. ಸದನ ಆರಂಭವಾದ ನಂತರ ಎರಡು ದಿನ ಕಾದು ನೋಡಲಾಗುವುದು. ಈ ಭಾಗದ ಬಗ್ಗೆ ಚರ್ಚೆ ಮಾಡದಿದ್ದರೆ ಹುಬ್ಬಳ್ಳಿಗೆ ಆಗಮಿಸುವ ಸಚಿವರಿಗೆ, ಶಾಸಕರಿಗೆ ಕಪ್ಪು ಬಟ್ಟೆ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.
ಬಾಬಜಾನ ಮುಧೋಳ, ಸಂಜು ದುಮಕನಾಳ, ಎಚ್.ಕೆ. ದೊಡ್ಡಮನಿ, ರವಿ ವಡ್ಡರ, ಸಂತೋಷ ಡೊಳ್ಳಿನ ಇತರರಿದ್ದರು.