ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ನನ್ನ ಆಸ್ತಿಯನ್ನು (Property) ತನಿಖೆ (Investigation) ಮಾಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ (ಹೆಸರು ಹೇಳದೆ ಪರೋಕ್ಷವಾಗಿ ಸಚಿವ ಚೆಲುವರಾಯಸ್ವಾಮಿಗೆ ಸವಾಲ್ ಹಾಕಿದ್ದಾರೆ.
ಕುಮಾರಸ್ವಾಮಿ ಆಸ್ತಿ ತನಿಖೆ ಮಾಡಿಸಿ ಎಂಬ ಚೆಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ನನ್ನ ಸ್ನೇಹಿತರೊಬ್ಬರು, ನನ್ನ ಆಸ್ತಿ ತನಿಖೆ ಮಾಡುವ ಭಯಕ್ಕೆ ಬಿಜೆಪಿ ಜೊತೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಈಗ ತನಿಖೆ ಮಾಡಿ ಎಂದು ಹೇಳುತ್ತಿದ್ದಾರೆ. ನಾನು ಈಗಲೂ ಸಿದ್ಧ. ನನ್ನ ಆಸ್ತಿ ತನಿಖೆ ಮಾಡಿಸಿ. ನಿಮ್ಮದೆ ಸರ್ಕಾರ ಇದೆ. ಸಿಎಂಗೆ ಹೇಳಿ ಯಾವ ತನಿಖೆ ಬೇಕೋ ಮಾಡಿಸಿ ಎಂದರು
ನನ್ನ ಆಸ್ತಿ ತನಿಖೆ ಆಗಲಿ. ಅದರ ಜೊತೆ ಮಾಕಳಿ ಗ್ರಾಮದ ಮೂರೂವರೆ ಎಕರೆ ಕೆರೆ ಜಾಗ ಸರ್ವೆ ನಂಬರ್ 13 ಕೆರೆನೇ ಮಾಯ ಆಗಿದೆ. ಆ ಕೆರೆ ಜಾಗ ನಾನು ನುಂಗಿ ಹಾಕಿದ್ದೀನಾ? ಆ ಕೆರೆ ನುಂಗಿ ಹಾಕಿದ್ದು ಯಾರು? ಇದು ತನಿಖೆ ಆಗಲಿ ಅಂತ ಚೆಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಬಾಂಬ್ ಸಿಡಿಸಿದರು