ಹುಬ್ಬಳ್ಳಿ: ಕೇಂದ್ರದಿಂದ ಅಕ್ಕಿ ಕೊಡುತ್ತೇವೆ ಅಂದರೂ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವಾಗ ಅಕ್ಕಿ ಕೊಡ್ತೀನಿ ಅಂದರೂ ತಗೋತಿಲ್ಲ. ಮುನಿಯಪ್ಪ ಅವರು ಬಂದು ಅಕ್ಕಿ ಕೊಡ್ತೀರಾ ಅಂತಾ ಕೇಳಿದ್ರು. ನಾವು ಎಸ್ ಅಂದೀವಿ. ಆದ್ರೆ ಸಿದ್ದರಾಮಯ್ಯ ಅನುಮತಿ ಕೊಟ್ಟಿಲ್ಲ. ಯಾಕೆ ಕೊಟ್ಟಿಲ್ಲ ಅನ್ನೋದನ್ನ ಮುನಿಯಪ್ಪ ಹೇಳಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ನಲ್ಲಿ ಸಿಎಂ ವಿಚಾರಕ್ಕೆ ಕೋಲಾಹಲ ವಿಚಾರ ಕುರಿತು ಮಾತನಾಡಿ, ಸಿಎಂ ವಿಚಾರವಾಗಿ ಮೊದಲು ದೇಶಪಾಂಡೆ ನಾನ ರೆಡಿ ಅಂದರು. ಆಮೇಲೆ ಪರಮೇಶ್ವರ, ಡಿಕೆ ಶಿವಕುಮಾರ್ ಅಂತೂ ಮೊದಲೇ ಕಾಯ್ತಿದ್ದಾರೆ. ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಇನ್ನಷ್ಟು ದಿನಕ್ಕೆ ಪೋಸ್ಟರ್ ಹಾಕ್ತಾರೆ. ಕಾಂಗ್ರೆಸ್ನವರು ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
Keep bananas fresh: ಬಾಳೆಹಣ್ಣು ಬೇಗ ಹಾಳಾಗದಂತೆ ಇಡಲು ಇಲ್ಲಿದೆ ಸುಲಭ ಉಪಾಯ!
ಅಭಿವೃದ್ಧಿ ಬಗ್ಗೆ ಮಾತಾಡಿ ಅಂತ ಕೇಳಿದ್ದಾರೆ. ನಾನು ಇವಾಗ ದುಡ್ಡು ಕೊಡ್ರಪ್ಪಾ ಅಂತಾ ಕೇಳಬೇಕು. ಬರ ಪರಿಹಾರದ ದುಡ್ಡು ಕೊಟ್ಟಿಲ್ಲ. ಅನೇಕ ಕಾಂಗ್ರೆಸ್ ಶಾಸಕರು, ಅಧಿಕಾರಿಗಳು ನಮಗೆ ದುಡ್ಡು ಕೊಡಿಸಿ ಅಂತಾ ಕೇಳ್ತಿದ್ದಾರೆ. ರಸ್ತೆ ಎಲ್ಲ ಹಾಳಾಗಿವೆ, ಹುಬ್ಬಳ್ಳಿಯಲ್ಲೂ ರಸ್ತೆ ಸರಿ ಇಲ್ಲ, ಪಾಲಿಕೆಗೆ ದುಡ್ಡು ಕೊಡುತ್ತಿಲ್ಲ. ರಾಜ್ಯದಲ್ಲಿ ಆರ್ಥಿಕ ಅಸಮತಲೋತನ ಉಂಟಾಗಿದೆ. ಪ್ಲ್ಯಾನ್ ಇಲ್ಲದೇ ಅಸಮತೋಲನ ಉಂಟಾಗಿದೆ. ಹಿಮಾಚಲ ಪ್ರದೇಶದ ತರಹ ಕರ್ನಾಟಕ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.