ಬೆಂಗಳೂರು: 136 ಶಾಸಕರ ಬೆಂಬಲ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಳಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಆದರೆ ಅದ ಸಾಧ್ಯವಿಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ನಾನು ಪ್ರಾಮಾಣಿಕ, ನನ್ನನ್ನು ಮುಗಿಸೋಕೆ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಒಂದು ಕ್ಷುಲ್ಲಕ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ತೆಗಿಬೇಕು ಅಂತಾ ಪಾದಯಾತ್ರೆ ಮಾಡ್ತಿದ್ದಾರೆ. ಪಾದಯಾತ್ರೆ ದೇಶದಲ್ಲಿ ಅಭಿವೃದ್ಧಿ ಕೆಲಸಕ್ಕೆ ಮಾಡಲಿ. ಕೇಂದ್ರದಲ್ಲಿ ಇವರನ್ನ ಸಚಿವರನ್ನಾಗಿ ಮಾಡಿದ್ದಾರೆ. ನಮ್ಮ ಕಡೆಯಿಂದ ನಾಲ್ಕು ಜನ ಸಚಿವರಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆ ಇವರು ಚಿಂತನೆ ಮಾಡ್ಬೇಕು ಎಂದು ರಾಜ್ಯದ ಕೇಂದ್ರ ಸಚಿವರಿಗೆ ಟಾಂಗ್ ಕೊಟ್ಟರು.
ಜನಾದೇಶಕ್ಕೆ ನಾವು ಗೌರವ ಕೋಡೋಣ. 136 ಸೀಟ್ ಗೆದ್ದು ಜನಾದೇಶ ಪಡೆದಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ತೆಗಿಬೇಕು ಅಂತಾ ಚಿಂತನೆ ಮಾಡಿದ್ದಾರೆ. ಇದರ ವಿರುದ್ದವಾಗಿ ನಾಳೆ ಜನಾಂದೋಲನ ಕಾರ್ಯಕ್ರಮವನ್ನ ಬೃಹತ್ ಮಟ್ಟದಲ್ಲಿ ಮಾಡ್ತೀವಿ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶದ ಸರ್ಕಾರವನ್ನ ಯಾವುದೇ ಕಾರಣಕ್ಕೂ ಅವರು ಬದಲಾವಣೆ ಮಾಡೋದಕ್ಕೆ ನಾವು ಬಿಡೋದಿಲ್ಲ. ಸಿದ್ದರಾಮಯ್ಯ ಅವರಿಗೆ ಈ ಕೇಸ್ನಲ್ಲಿ ಯಾವುದೇ ಸಂಬಂಧ ಇಲ್ಲ. ಸಿಎಂ ಅವರು ಫೋನ್ ಮಾಡಿಲ್ಲ, ಪತ್ರ ಬರೆದಿಲ್ಲ. ಸೈಟ್ ಕೊಡಿ ಎಂದು ಕೇಳಿಲ್ಲ. ಇದಕ್ಕೆ ನಾವು ಕಮಿಟಿ ಮಾಡಿದ್ದೇವೆ. ಕಮಿಟಿ ತೀರ್ಮಾನ ಕೊಡ್ಲಿ. ಅದಕ್ಕೆ ನಾನು ಬದ್ದವಾಗಿರುತ್ತೇನೆ ಎಂದರು.