ದಾವಣಗೆರೆ:- ಭಾರತ ಹಿಂದು ರಾಷ್ಟ್ರಾಆಗೇ ಆಗತ್ತೆ, ತಾಕತ್ ಇದ್ರೆ ಯತೀಂದ್ರನೂ ತಡೀಲಿ, ಮುಖ್ಯಮಂತ್ರಿನೂ ತಡೀಲಿ, ಕಾಂಗ್ರೆಸ್ ನವರು ತಡೀಲಿ ನೋಡೋಣ ಎಂದು ಕಾಂಗ್ರೆಸ್ ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲ್ ಹಾಕಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಯತೀಂದ್ರ ಹೇಗಂದ್ರೆ ಮರಿ ಸಿದ್ದರಾಮಯ್ಯ ಇದ್ದಂತೆ. ಇದೇ ಮಾತನ್ನ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ್ ದಲ್ಲಿ ಹೇಳಿದ್ದರೆ ಅಲ್ಲೆ ಗುಂಡು ಹೊಡೆಯುತ್ತಿದ್ದರು. ಪಾಕಿಸ್ತಾನದಲ್ಲಿ ಗಲಭೆ, ಕೊಲೆ ಗಳು ನಡೆಯುತ್ತವೆ ಎಂದು ಒಪ್ಪಿಕೊಂಡಂತಾಯ್ತು. ಮುಸ್ಲಿಂ ಓಟ್ ಗಾಗಿ ಹಿಂದುಗಳನ್ನ ಅವಹೇಳನ ಮಾಡುವುದನ್ನ ಇವರು ಬಿಡಬೇಕು. ಅಪ್ಘಾನಿಸ್ತಾನ್, ಪಾಕಿಸ್ತಾನ್ ಹುಟ್ಟವ ಮುನ್ನವೇ ಭಾರತ ಹಿಂದು ರಾಷ್ಟ್ರ. ಇಲ್ಲಿ ಜಾತ್ಯಾತೀಯತೆ, ಸಮಾನತೆ, ಏಕತೆ ಇದೆ. ಅದರಿಂದಲೇ ನೀವು ಮಾತನಾಡುವ ಸ್ವಾತಂತ್ರ್ಯ ಸಿಕ್ಕಿದೆ. ಯತೀಂದ್ರ ಬೆಳಕಿಗೆ ಬಂದಿದ್ದು ಸಿದ್ದರಾಮಯ್ಯನಿಂದ.
ಯತೀಂದ್ರ ಎಲ್ಲ ಅಧಿಕಾರಿಗಳನ್ನ ಹೇಗ ಬೇಕೋ ಹಾಕೆ ಟ್ರಾನ್ಸ ಪರ್ ಮಾಡಿಸಿಕೊಂಡಿದ್ದಾರೆ. ಇನ್ನು ನಿಮಗೆ ಹಿಂದು, ಹಿಂದುತ್ವದ ಬಗ್ಗೆ ಜ್ಞಾನವಿಲ್ಲ. ಅದರ ಬಗ್ಗೆ ಮಾತನಾಡುವ ನೈತಿಕತೆ ಇತನಿಗೆ ಇಲ್ಲ ಎಂದರು.
ಇನ್ನೂ ಕಾಂಗ್ರೆಸ್ ನಲ್ಲಿ ಹಿಂದು ಸಂಘಟನೆ ಮತ್ತು ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಗಡೀಪಾರು ಮಾಡುವುದು, ಕೊಲೆಗೆ ಪ್ರಚೋಧನೆ, ಹಳೆ ಕೇಸ್ ಓಪನ್ ಮಾಡುವುದು. 2017ರ ದತ್ತಪೀಠ ಕೇಸ್ ನ್ನ ಈಗ ಓಪನ್ ಮಾಡಿದ್ದಾರೆ 30 ವರ್ಷಗಳಿಂದ ಬಂಧಿಸದೇ ಈಗ ಯಾಕೆ ಸರ್ಕಾರ ಬಂಧಿಸಿದೆ..? ಎಲ್ಲರು ರಾಮ ಮಂದಿರದ ಕಡೆ ನೋಡುತ್ತಿದ್ದಾರೆ. ಎಲ್ಲರನ್ನ ಹೆದರಿಸುವ ವಾತಾವರಣ ನಿರ್ಮಿಸಲು ಕೇಸ್ ಓಪನ್ ಮಾಡಲಾಗುತ್ತಿದೆ ಎಂದರು.