ಬೆಂಗಳೂರು;- ಕಾಂಗ್ರೆಸ್ಸಿನ 50 ಜನ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಈ ಸಂಬಂಧ ಮಾತನಾಡಿದ ಅವರು,ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿ- ಜೆಡಿಎಸ್ನಲ್ಲಿ ಯಾರೂ ಉಳಿಯುವುದಿಲ್ಲ. ಇನ್ನೂ ಐದು ತಿಂಗಳು ಸಮಯ ಕೊಡುತ್ತೇನೆ. ಕಾಂಗ್ರೆಸ್ಸಿನ 50 ಜನ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ’ ಎಂದರು.
ಮಾತೆತ್ತಿದರೆ ವರಿಷ್ಠರು, ವರಿಷ್ಠರು ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ರಾಜ್ಯ ನಾಯಕರಿಗೆ ಬೆಲೆ ಇಲ್ಲವೇ? ಎಲ್ಲವನ್ನೂ ವರಿಷ್ಠರೇ ಮಾಡುತ್ತಾ ಇದ್ದರೆ ನೀವೇನು ಮಾಡುತ್ತಾ ಇದೀರಿ? ಬೆರಳು ಚೀಪುತ್ತಾ ಇದ್ದೀರಾ’ ಎಂದು ವ್ಯಂಗ್ಯವಾಡಿದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ನ 19 ಶಾಸಕರು ಬೆಂಬಲ ಕೊಡುತ್ತೇವೆ’ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಕುಮಾರಸ್ವಾಮಿಯವರ ಬೆಂಬಲ ಕೇಳಿದವರ್ಯಾರು? ಈಗ ನಮಗೆ ಅವರ ಅವಶ್ಯಕತೆ ಏನಿದೆ? ಯಾರು ಮುಖ್ಯಮಂತ್ರಿ ಆಗುತ್ತಾರೆ, ಯಾರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎನ್ನುವುದು ಅವರಿಗೆ ಏಕೆ ಬೇಕು’ ಎಂದರು.