ಗಂಗಾವತಿ: ನಗರದ ಜಯನಗರದಲ್ಲಿರುವ ಸೆಂಟ್ ಪಾಲ್ಸ್ ಶಾಲೆಯ ಹಿಂಭಾಗದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಬೆಳಗಿನಜಾವ ಚಿರತೆ ಬಿದ್ದಿದೆ.
Heart Attack: ನಿತ್ಯ ನೀವು ಮಾಡುವ ಈ ತಪ್ಪುಗಳೇ ಹೃದಯಾಘಾತಕ್ಕೆ ಕಾರಣ?
ಇತ್ತೀಚೆಗೆ ಕಳೆದ ದಿನಗಳಿಂದ ವಾಲ್ಮೀಕಿ ನಗರದ ಗುಡ್ಡದ ಏರಿಯಾದಲ್ಲಿ ಚಿರತೆಯು ನಾಯಿ, ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಚಿರತೆಯೊಂದು ಆತಂಕ ಸೃಷ್ಟಿಸಿತ್ತು. ವಾಲ್ಮೀಕಿ ನಗರದ ನಿವಾಸಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಹಲವು ಬಾರಿ ಸುದ್ದಿಗಳು ಪ್ರಸಾರವಾಗಿತ್ತು ಮತ್ತು ಸಾರ್ವಜನಿಕರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯವರು ಎರಡು ದಿನಗಳ ಹಿಂದೆ ಜಯನಗರದಲ್ಲಿರುವ ಸೆಂಟ್ ಪಾಲ್ಸ್ ಶಾಲೆಯ ಹಿಂಭಾಗದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವುದರಿಂದ ವಾಲ್ಮೀಕಿ ನಗರದ ಜನ ಸ್ವಲ್ಪಮಟ್ಟಿಗೆ ನಿರಾಳವಾಗಿದ್ದರೂ, ಇನ್ನೂ ಸಾಕಷ್ಟು ಚಿರತೆಗಳು ಇವೆ ಎಂಬ ಆತಂಕದಲ್ಲಿದ್ದಾರೆ. ವಾಲ್ಮೀಕಿ ನಗರದ ನಿವಾಸಿಗಳು
ಅರಣ್ಯ ಇಲಾಖೆಯವರು ತುರ್ತು ಕ್ರಮವಹಿಸಿ ಚಿರತೆ ಹಿಡಿಯಲು ಮುಂದಾಗಬೇಕಿದೆ. ಇಲ್ಲದಿದ್ದರೆ ಜನ, ಜಾನುವಾರುಗಳು ತಿರುಗಾಡಲು ಕಷ್ಟವಾಗುವುದು. ಇಲಾಖೆಯವರು ಬೋನಿಗೆ ಬಿದ್ದ ಚಿರತೆಗಳನ್ನು ದೂರದ ಆರಣ್ಯ ಪ್ರದೇಶಕ್ಕೆ ಬಿಡಬೇಕು ಎಂದು ವಾಲ್ಮೀಕಿ ನಗರದ ನಿವಾಸಿಯರು ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ.