ಬೆಂಗಳೂರು:– ಅರಣ್ಯ ಇಲಾಖೆಯು ಬೆಂಗಳೂರು ಜಿಲ್ಲೆಯ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಲು ಚಿರತೆ ಕಾರ್ಯಪಡೆ ಹಾಗೂ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ ಒಂಬತ್ತು ಜಿಲ್ಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಲಭ್ಯವಿರುವ ಸಲಕರಣೆ, ಸಂಪನ್ಮೂಲ ಬಳಸಿಕೊಂಡು ಕೆಲಸ ಮಾಡಲು ಸೂಚಿಸಲಾಗಿದೆ.
ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ ಜಿಲ್ಲೆಗಳಾದ ಕೋಲಾರ-ಗೀತಾಂಜಲಿ, ತುಮಕೂರು-ಸ್ಮಿತಾ ಬಿಜ್ಜೂರು, ಬೆಂಗಳೂರು ಗ್ರಾಮಾಂತರ-ವನಶ್ರೀ ವಿಪಿನ್ ಸಿಂಗ್, ರಾಮನಗರ-ಅನಿಲ್ಕುಮಾರ್ ರತನ್, ಹಾಸನ-ಕುಮಾರ್ ಪುಷ್ಕರ್, ಚಿಕ್ಕಮಗಳೂರು-ವಿಜಯ್ ಮೋಹನ್ರಾಜ್, ಮೈಸೂರು-ಸಾಸ್ವತಿ ಮಿಶ್ರಾ, ಚಾಮರಾಜನಗರ-ಬಿಶ್ವಜಿತ್ ಮಿಶ್ರಾ, ಕೊಡಗು-ಬ್ರಿಜೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ನೋಡಲ್ ಅಧಿಕಾರಿಗಳು ವಾರದಲ್ಲಿ ಮೂರು ದಿನ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಬೇಕು. ಸಂಘರ್ಷ ತಡೆಗೆ ಯೋಜನೆ ರೂಪಿಸಬೇಕು ಎಂದು ಸೂಚಿಸಲಾಗಿದೆ.