ಮಂಡ್ಯ :- ಮದ್ದೂರು ಪಟ್ಟಣದ ರೈಲ್ವೆ ನಿಲ್ದಾಣದ ಸಮೀಪ ಚಿರತೆಗಳು ಓಡಾಟ ನಡೆಸಿರುವ ಘಟನೆ ಭಾನುವಾರ ಸಂಜೆ ಜರುಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.
ಪಾಳು ಬಿದ್ದ ರೈತರಿಗಾಗಿ ನಿರ್ಮಿಸಿದ ಮೆಗಾ ಮಾರ್ಕೆಟ್: ಕೋಟಿ-ಕೋಟಿ ವ್ಯರ್ಥವಾಯ್ತಾ!?
ಮದ್ದೂರು ಪಟ್ಟಣದ ಶಿವಪುರದ ರೈಲು ನಿಲ್ದಾಣ ಹಾಗೂ ಆಶ್ರಯ ಬಡಾವಣೆಯ ನಡುವೆ ಇರುವ ಹರಳೀಮರದ ಬಳಿ ಚಿರತೆ ಮತ್ತು ಎರಡು ಮರಿಗಳು ಭಾನುವಾರ ಸಂಚಾರ ಮಾಡುತ್ತಿರುವುದನ್ನು ವ್ಯಕ್ತಿಯೊಬ್ಬರು ಗಮನಿಸಿದ್ದಾರೆ.
ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದು, ಆಶ್ರಯ ಬಡಾವಣೆಯ ಸಾರ್ವಜನಿಕರಿಗೆ ಮತ್ತು ರೈಲು ನಿಲ್ದಾಣದ ಪ್ರಯಾಣಿಕರಿಗೆ ಸುದ್ದಿ ತಿಳಿಸಿದ್ದಾರೆ.
ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸಂಚಾರದ ಬಗ್ಗೆ ಸುದ್ದಿ ತಿಳಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ರಾತ್ರಿಯೇ ಅಲ್ಲಿ ಬೋನನ್ನು ಇರಿಸಿದ್ದಾರೆ.
ಜನನಿಬಿಡ ಪ್ರದೇಶದಲ್ಲಿ ಚಿರತೆ ಮತ್ತು ಎರಡು ಮರಿಗಳು ಸಂಚಾರ ಮಾಡುತ್ತಿರುವುದನ್ನು ವ್ಯಕ್ತಿಯೊಬ್ಬರು ಗಮನಿಸಿದ್ದಾರೆ. ಹೀಗಾಗಿ ಚಿರತೆ ಸೆರೆಗಾಗಿ ಬೋನನ್ನು ಇರಿಸಲಾಗಿದೆ. ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ಜನರು ರಾತ್ರಿ ಹೊತ್ತು ಒಬ್ಬರೇ ಓಡಾಟ ಮಾಡುವುದು ಹಾಗೂ ರೈತರು ಜಮೀನುಗಳ ತೆರಳುವಾಗ ಎಚ್ಚರಿಕೆಯಿಂದ ಇರುವಂತೆ ವಲಯ ಅರಣ್ಯಾಧಿಕಾರಿ ಗವಿಯಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ