ಚಾಮರಾಜನಗರ: ತಾಲೂಕಿನ ಕರಿನಂಜನಪುರ ಬಸವನಪುರ ರಾಮಸಮುದ್ರ ಸುತ್ತಾಮುತ್ತಾ ಮತ್ತೆ ಚಿರತೆ ಪ್ರತ್ಯಕ್ಷಗೊಂಡು ರೈತರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ಶನಿವಾರವಷ್ಟೆ ರಾಮಸಮುದ್ರದ ಪತ್ರಕರ್ತ ಬಾಬುರವರ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ನವಿಲು ಹಾಗೂ ಎರಡು ಸಾಕು ನಾಯಿಗಳನ್ನು ಚಿರತೆಯು ಬಲಿ ಪಡೆದಿತ್ತು. ಇದರಿಂದ ಆ ಭಾಗದ ರೈತರು ಹಾಗೂ ಕೂಲಿ ಕಾರ್ಮಿಕರು ಆತಂಕಕ್ಕೆ ಒಳಗಾಗಿ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ರು. ಇದಾದ ಐದೇ ದಿನದಲ್ಲಿ ಮತ್ತೆ ಚಿರತೆ ಅಡ್ಡಾಡಿ ಸಾಕು ನಾಯಿಗಳನ್ನು ಕೊಂದಿದೆ ಎಂದು ರೈತರು ಆರೋಪಿಸಿದ್ದಾರೆ
ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಚಿರತೆ ಸಂಚರಿಸಿರುವ ಹೆಜ್ಜೆ ಗುರುತುಗಳ ಆ ಭಾಗದಲ್ಲಿ ರೈತರಿಗೆ ದೊರೆತಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಬೋನು ಅಳವಡಿಸಿ ಚಿರತೆ ಸೆರೆಗೆ ಕ್ರಮಕೈಗೊಳ್ಲುವಂತೆ ಸ್ಥಳಿಯ ರೈತರು ಒತ್ತಾಯಿಸಿದ್ದಾರೆ.