ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಕಾಟದಿಂದ ಜನರು ಆತಂಕಗೊಂಡಿದ್ದಾರೆ.
ವಿವಾಹಿತ ಹಿಂದೂ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಮತಾಂತರಕ್ಕೆ ಯತ್ನ: ಆರೋಪಿ ಅರೆಸ್ಟ್!
ಪದೇ ಪದೇ ಚಿರತೆ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ದಿನಗಳ ಹಿಂದೆಯಷ್ಟೇ ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿತ್ತು.ಈಗ ಚಿರತೆಯ ಓಡಾಟ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಓಡಾಡಲು ಭಯ ಪಡುತ್ತಿದ್ದಾರೆ.
ಯಲಹಂಕ ಸುತ್ತಮುತ್ತಲಿನ ಶಿವಕೋಟೆ, ಮಾವಳಿಪುರ, ಕಾಳೇನಹಳ್ಳಿ ಲಿಂಗನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಯಲಹಂಕ ತಾಲೂಕಿನ ಹೆಸರಘಟ್ಟ ಸುತ್ತಮುತ್ತ ಚಿರತೆಗಳ ಹಿಂಡು ವಾಸವಾಗಿದೆ ಅಂತ ಗ್ರಾಮಸ್ಥರು ಆತಂಕ ಹೊರ ಹಾಕುತ್ತಿದ್ದಾರೆ. ಕೆರೆಗಳಲ್ಲಿ ಜಾಲಿ ಮರಗಳ ಮರೆಯಲ್ಲಿ ಚರತೆಗಳು ವಾಸಿಸುತ್ತಿವೆ ಅನ್ನೋ ಶಂಕೆ ವ್ಯಕ್ತವಾಗಿದೆ. ಮುಂಜಾನೆ ವೇಳೆ ಕುರಿ ಶೆಡ್ ಹಾಗೂ ನಾಯಿಗಳ ಮೇಲೆ ಚಿರತೆ ದಾಳಿ ಮಾಡಿತ್ತಿದೆ ಅಂತ ಗ್ರಾಮಸ್ಥರು ದೂರು ಕೊಟ್ಟಿದ್ದಾರೆ.
ಬೆಂಗಳೂರು ಉತ್ತರ ಯಲಹಂಕ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಆತಂಕ ಗ್ರಾಮಸ್ಥರಲ್ಲಿ ಕಾಡುತ್ತಿದೆ.