ಮಂಡ್ಯ: ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕೆ.ಆರ್.ಪೇಟೆ ತಾಲೂಕಿನಲ್ಲಿ ಜನರು ನಿತ್ಯ ಆತಂಕದಲ್ಲೇ ಜೀವನ ಕಳೆಯುತ್ತಿದ್ದಾರೆ. ಈ ನಡುವೆ ತಾಲೂಕಿನ ಕೊರಟಿಗೆರೆ ಗ್ರಾಮದಲ್ಲಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.ಪ್ರಭಾಕರ್ ಎಂಬುವರಿಗೆ ಸೇರಿದ ಹಸು ಮೇಲೆ ದಾಳಿ ಮಾಡಲಾಗಿದ್ದು,
ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ!
ಕೆಲ ದಿನಗಳಿಂದಷ್ಟೇ ಪ್ರಭಾಕರ್ ಅವರ ಸಾಕು ನಾಯಿ ಹೊತ್ತೊಯ್ದಿದ್ದ ಅದೇ ಚಿರತೆ ಇದೀಗ ಹಸು ಮೇಲೆ ದಾಳಿ ಮಾಡಿದೆ. ಇನ್ನೂ ಗಾಯಗೊಂಡ ಹಸುವಿಗೆ ಪಶು ವೈದ್ಯರಿಂದ ಚಿಕಿತ್ಸೆ ನೀಡಲಾಗಿದ್ದು, ಚಿರತೆ ದಾಳಿಯಿಂದ ಗ್ರಾಮದ ಜನರು ಭಯಬೀತರಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಚಿರತೆ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.