ಆಂಧ್ರಪ್ರದೇಶ:– ಆಂಧ್ರಪ್ರದೇಶದ ಅನಂತಪುರಂನಲ್ಲಿ ಮನೆಯಲ್ಲಿ ಆಟವಾಡುತ್ತಾ ಮಗುವೊಂದು ನಿಂಬೆಹಣ್ಣು ನುಂಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ.
ಸಾಕಿದೀಪ ಮತ್ತು ಗೋವಿಂದರಾಜ್ ದಂಪತಿಯ ಜಸ್ವಿತಾ (9 ತಿಂಗಳು) ಮೃತ ಮಗು. ಎಂದಿನಂತೆ ಮನೆಯಲ್ಲಿ ಆಡುತ್ತಾ ಮನೆಯಲ್ಲಿತ್ತು. ತಾಯಿ ಮಗುವನ್ನು ನೋಡುತ್ತಾ , ಮತ್ತೊಂದು ಕಡೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗು ಜಗಲಿಯಲ್ಲಿದ್ದ ನಿಂಬೆಹಣ್ಣನ್ನು ಹಿಡಿದು ನುಂಗಿದೆ. ಆ ಬಳಿಕ ಮಗುವಿನ ಉಸಿರಾಟದಲ್ಲಿ ತೊಂದರೆ ಆಗಿದೆ. ಕೂಡಲೇ ತಾಯಿ ಗಂಟಲಿನಲ್ಲಿ ಸಿಲುಕಿದ್ದ ನಿಂಬೆಹಣ್ಣನ್ನು ತೆಗೆಯಲು ಯತ್ನಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಪರಿಕ್ಷೀಸಿದ ಬಳಿಕ ಆದಾಗಲೇ ಮಗು ಮೃತಪಟ್ಟಿದೆ ಎಂದಿದ್ದಾರೆ. ಸಾಕಿದೀಪ ಮತ್ತು ಗೋವಿಂದರಾಜ್ ದಂಪತಿಗೆ ಮದುವೆಯಾದ 7 ವರ್ಷದ ಬಳಿಕ ಮಗು ಜನಿಸಿತ್ತು. ಆದರೆ ಇಂತಹ ಆಕಸ್ಮಿಕ ದುರಂತದಲ್ಲಿ ಮಗು ಮೃತಪಟ್ಟಿದೆ.