ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ತಾಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ ಬಸವನ ಬಾಗೇವಾಡಿ ಇವರ ಸಂಯೋಗದಲ್ಲಿ ಕಾರ್ಯಕ್ರಮ ಜರಗಿತು.
ರೈತರೇ ಗಮನಿಸಿ.. ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ನಿಮಗೆ ಸಿಗಲಿದೆ ತಿಂಗಳಿಗೆ 3 ಸಾವಿರ ರೂ.ಪಿಂಚಣಿ!
ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ತೇಜಸ್ವಿನಿ ಸೊಗಲದ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು ಆನಂತರ ಮಾತನಾಡುತ್ತಾ ಮಾನವ ಹಕ್ಕುಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಗುರುಶಾಂತ್ ದಾಶ್ಯಾಳ, ಮುಖ್ಯ ಅತಿಥಿಗಳಾದ ಎಚ್ ಎಸ್ ಗುರೆಡ್ಡಿ, ವಿನೋದ್ ಪೂಜಾರಿ, ಆರ್ ಎಸ್. ಪವಾರ್ ಸೇರಿದಂತೆ ಊರಿನ ಹಿರಿಯರು ಯುವಕರು ಪೊಲೀಸ್ ಸಿಬ್ಬಂದಿಗಳು ಉಪಸಿತರಿದ್ದರು..