ಬೆಂಗಳೂರು:- ನನ್ನ ವಿರುದ್ಧ ಎಫ್ ಐಆರ್ ಮಾಡಿರುವವರ ವಿರುದ್ದ ಕಾನೂನು ಹೋರಾಟ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಿಬಿಐನವರು ನನ್ನ ಸಂಸ್ಥೆಗಳಿಗೆ ಸ್ನೇಹಿತರಿಗೆ ಎಲ್ಲೆಲ್ಲಿ ವ್ಯವಹಾರ ಮಾಡಿದ್ದೇನೋ ಅಲ್ಲೆಲ್ಲಾ ನೂರಾರು ನೋಟಿಸ್ ಕೊಡ್ತಿದ್ದಾರೆ. ಸರ್ಕಾರ ವಾಪಸ್ ಪಡೆದ ನಂತರವೂ ನೋಟಿಸ್ ಕೊಡ್ತಿದ್ದಾರೆ ಯಾಕೆ ಕೊಡ್ತಿದ್ದಾರೋ ಗೊತ್ತಿಲ್ಲ ಎಂದರು
ಸರ್ಕಾರ ವಿಥ್ ಡ್ರಾ ಮಾಡಿದ ನಂತರ ಲೋಕಾಯುಕ್ತಕ್ಕೆ ಟ್ರಾನ್ಸ್ ಫರ್ ಮಾಡಿದ್ದರು. ಈಗ ಉದ್ದೇಶ ಏನೋ ಗೊತ್ತಿಲ್ಲ, ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ. ಅದು ತಪ್ಪು ಇದು ತಪ್ಪು ಎರಡೂ ತಪ್ಪೇ. ಯಡಿಯೂರಪ್ಪ ಸರ್ಕಾರ ಸಿಬಿಐ ಗೆ ಕೊಟ್ಟಿದ್ದೇ ತಪ್ಪು. ಅವತ್ತಿನ ಅಡ್ವೋಕೆಟ್ ಜನರಲ್ ಕೊಡಬೇಡಿ ಎಂದ ಮೇಲೂ ಕೊಟ್ಟಿದ್ದರು. ನಾನು ಆರ್ ಟಿಐ ನಲ್ಲಿ ಎಲ್ಲಾ ಮಾಹಿತಿ ಅಂದೇ ತೆಗೆದುಕೊಂಡಿದ್ದೇನೆ. ಈಗ ಲೋಕಾಯುಕ್ತ ಎಫ್ ಐಆರ್ ಮಾಡಿದ್ದಾರೆ ನೋಡೋಣ ಎಂದಿದ್ದಾರೆ.
ಇನ್ನೂ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಯ ಪೂರ್ವಾನುಮತಿಯನ್ನು ಹಿಂಪಡೆದ ಬಳಿಕ ಸರ್ಕಾರ ತನಿಖೆಯ ಜವಾಬ್ದಾರಿಯನ್ನು ಲೋಕಾಯುಕ್ತಕ್ಕೆ ನೀಡಿತ್ತು. ಈಗ ಲೋಕಾಯುಕ್ತ ಪೊಲೀಸರು ಫೆ.8 ರಂದು ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ