ಬೆಂಗಳೂರು:- ಮಕ್ಕಳನ್ನು ಬೇಕಾಬಿಟ್ಟಿ ಬಿಡೋ ಪೋಷಕರೇ ಹುಷಾರ್.ಪಾಪ ನಾವು ಹೇಳುತ್ತಿರುವ ಬಾಲಕನ ಸ್ಥಿತಿ ಕಂಡ್ರೆ ನಿಜಕ್ಕೂ ಅಯ್ಯೋ ಪಾಪ ಅನ್ಸತ್ತೆ ಕಂಡ್ರಿ.
ತಂದೆ ಕುಡುಕ ತಂದೆ, ಕೂಲಿ ಕೆಲಸ ಮಾಡೋ ತಾಯಿ. ಮನೆಯಲ್ಲಿ ನೆಮ್ಮದಿ ಇಲ್ಲದ ಬಾಲಕ ಮಾಡ್ತಾ ಇದ್ದಿದ್ದು ಏನು ಗೊತ್ತಾ .? ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಈತ ಪೊಲೀಸರಿಗೂ ಟೆನ್ಷನ್ ಕೊಡ್ತಿದ್ದ. ಹಾಗಾದ್ರೆ ಆ ಬಾಲಕ ಮಾಡ್ತಾ ಇದ್ದ ಕೆಲಸ ಏನು..? ಎಂಬ ವಿಚಾರ ತಿಳಿಯೋಣ ಬನ್ನಿ.
ಎಸ್, ಈ ಬಾಲಕನ ಸ್ಥಿತಿ ಕೇಳಿದ್ರೆ ನಿಜಕ್ಕೂ ಅಯ್ಯೋ ಅನಿಸುತ್ತೆ. ಹೊಟ್ಟೆ ತುಂಬ ಊಟ, ಕಣ್ ತುಂಬ ನಿದ್ದೆ ಸಿಗುತ್ತೆ ಅಂತಾನೆ ಮನೆ ಬಿಟ್ಟು ಬರ್ತಿದ್ದ. ಹಾಗೆ ಓದಿನಲ್ಲೂ ಕೂಡ ಅಷ್ಟೊಂದು ಆಸಕ್ತಿ ಇರದೇ ಮನೆ ಬಿಡ್ತಿದ್ದ. ಇನ್ಸ್ ಪೆಕ್ಟರ್ ಉದಯ ರವಿ ಮಾನವೀಯ ಕೆಲಸದಿಂದ ಮತ್ತೆ ಬಾಲಕ ಪೋಷಕರ ಮಡಿಲು ಸೇರಿದ್ದಾನೆ.
ಶಂಕರಪುರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿರುವ ಉದಯ ರವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ಆರು ದಿನದ ಹಿಂದೆ ರಾತ್ರಿ ಹೊತ್ತು ಫುಟ್ಪಾತ್ ನಲ್ಲಿ ಬಾಲಕ ನಿಂತಿದ್ದ. ವಿಚಾರಿಸಿದಾಗ ತಂದೆ ತಾಯಿ ಗೊತ್ತಿಲ್ಲ,ಊರು ಗೊತ್ತಿಲ್ಲ ಎಂದು ಬಾಲಕ ಹೇಳಿದ್ದಾನೆ.
ಬಳಿಕ ಬಾಲ ಮಂದಿರಕ್ಕೆ ಬಾಲಕನನ್ನು ಪೊಲೀಸರು ಬಿಟ್ಟು ಬಂದಿದ್ದಾರೆ. ಬಾಲಕನ ಪೋಷಕರ ಪತ್ತೆಗೆ ಪೊಲೀಸರು ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದ್ದರು. ಸದ್ಯ ಅತ್ತಿಬೆಲೆ ಠಾಣೆಗೆ ಬಾಲಕನ ಪೋಷಕರು ಆಗಮಿಸಿದ್ದಾರೆ. ವಿಚಾರಣೆ ವೇಳೆ ಇಂಟರಸ್ಟಿಂಗ್ ಸಂಗತಿ ಬಯಲಿಗೆ ಬಂದಿದೆ.
ಬಾಲಕನಿಗೆ ಮನೆಯಲ್ಲಿ ಸರಿಯಾಗಿ ಊಟ ತಿಂಡಿ ಸಿಗ್ತಿರಲಿಲ್ಲ. ಹಾಗಾಗಿ ಮನೆ ಬಿಟ್ಟು ಬಂದು ಫುಟ್ಪಾತ್ ನಲ್ಲಿ ನಿಂತುಕೊಳ್ತಿದ್ದ. ಪೊಲೀಸರು ಆತನನ್ನ ಬಾಲಮಂದಿರಕ್ಕೆ ಬಿಟ್ಟು ಬರ್ತಿದ್ರು. ಬಾಲ ಮಂದಿರದಲ್ಲಿ ಊಟ ತಿಂಡಿ ಮಾಡಿ ನೆಮ್ಮದಿಯಾಗಿ ಇರ್ತಿದ್ದ. ಇದನ್ನೇ ಬಾಲಕ ಕೆಲಸವನ್ನಾಗಿ ಮಾಡಿಕೊಂಡಿದ್ದ.
ಈ ಹಿಂದೆ ಕೂಡ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕ ಸಿಕ್ಕಿದ್ದ. ಅತ್ತಿಬೆಲೆ,ಸರ್ಜಾಪುರ,
ಹೊಸಕೋಟೆ ಪೊಲೀಸರ ಕೈಗೆ ಸಿಕ್ಕಿದ್ದ. ಬಾಲ ಮಂದಿರಕ್ಕೆ ಬಿಟ್ಟು ಪೊಲೀಸರು ಬಂದಿದ್ದರು. ಬಳಿಕ ಪೋಷಕರು ಬಂದು ಕರೆದುಕೊಂಡು ಹೋಗ್ತಿದ್ರು, ಈ ಬಾರಿ ಮತ್ತೆ ಶಂಕರಪುರ ಪೊಲೀಸ್ ಠಾಣೆ ಬಳಿ ಪತ್ತೆಯಾಗಿದ್ದ. ಹೀಗಾಗಿ ಇದು ಮಕ್ಕಳನ್ನು ಬೇಕಾಬಿಟ್ಟಿ ಬಿಡೋ ಪೋಷಕರಿಗೆ ಇದು ಪಾಠ ಎನ್ನಲಾಗಿದೆ.