ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲಿ ಎಣ್ಣೆಯನ್ನು ತಯಾರಿಸಿ ಬಳಸುವುದು ಪ್ರಯೋಜನಕಾರಿ. ಇದಕ್ಕೆ 1 ಕಪ್ ದಾಸವಾಳದ ಹೂವುಗಳು ಮತ್ತು 2 ಕಪ್ ಸಾಸಿವೆ ಎಣ್ಣೆ ಬೇಕಾಗುತ್ತದೆ.
ಮೊದಲು ದಾಸವಾಳದ ಹೂವನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಕಾದ ಎಣ್ಣೆಗೆ ದಾಸವಾಳದ ಹೂವನ್ನು ಹಾಕಿ ಕುದಿಯಲು ಬಿಡಿ. ಹೂವುಗಳು ಸರಿಯಾದ ಬಳಿಕ ಚೆನ್ನಾಗಿ ತಳಿ ಮತ್ತು ಎಣ್ಣೆಯನ್ನು ತಣ್ಣಗಾಗಿಸಿ. ಈಗ ಈ ಎಣ್ಣೆಯನ್ನು ಶುದ್ಧವಾದ ಬಾಟಲಿಯಲ್ಲಿ ತುಂಬಿಸಿ
ಪ್ರತಿ ಬಾರಿ ತಲೆಸ್ನಾನ ಮಾಡುವ ಮೊದಲು ಈ ಎಣ್ಣೆಯನ್ನು ಹಚ್ಚಿಕೊಳ್ಳಿ. ಎಣ್ಣೆ ಹಚ್ಚಿದ ಬಳಿಕ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ ಇದರಿಂದ ಎಣ್ಣೆಯು ಬೇರುಗಳಿಗೆ ಸರಿಯಾಗಿ ತಲುಪುತ್ತದೆ.
1-2 ಗಂಟೆಗಳ ಕಾಲ ಬಿಡಿ ಮತ್ತು ನಂತರ ಸೌಮ್ಯವಾದ ಶಾಂಪೂ ಬಳಸಿ ನೀರಿನಿಂದ ತೊಳೆಯಿರಿ. ವಾರದಲ್ಲಿ 2-3 ಬಾರಿ ಹೀಗೆ ಮಾಡಿ ಮತ್ತು ಕೆಲವೇ ಸಮಯದಲ್ಲಿ ನಿಮ್ಮ ಬಿಳಿ ಕೂದಲು ಕಪ್ಪಾಗುತ್ತದೆ