ಹುಬ್ಬಳ್ಳಿ:,ಭಾಗ್ಯಗಳ ಸರದಾರ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಮನೆ ಮಾತಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸ್ಲಂ ಬೋರ್ಡ್ ಅಧ್ಯಕ್ಷರು ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ ಅವರ ನೇತೃತ್ವದಲ್ಲಿ ಹೊಸ ವರ್ಷದ ಪ್ರಯುಕ್ತ ಹೂಗುಚ್ಛ ನೀಡಿ ಹೊಸ ವರ್ಷದ ಶುಭಾಷಯ ತಿಳಿಸಲಾಯಿತು.
ಹಲಸು ಕೃಷಿ ಮಾಡಿ ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ! ವಿಧಾನಗಳೇನು.? ಇಲ್ಲಿದೆ ಮಾಹಿತಿ
ಇದೇ ಸಂದರ್ಭದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ, ಇತ್ತೀಚೆಗೆ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ಐದು ಲಕ್ಷ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಲಾಯತು.
ಈ ಸಂದರ್ಭದಲ್ಲಿ ಮುಖಂಡರಾದ ಅನ್ವರ್ ಮುಧೋಳ್, ರಾಜಶೇಖರ್ ಮೆಣಸಿನಕಾಯಿ, ಮಜರ್ ಖಾನ್, ಶಫಿ ಮುದ್ದೇಬಿಹಾಳ್, ಬಾಬಾಜಾನ್ ಮುಧೋಳ್ ಸೇರಿದಂತೆ ಮುಂತಾದವರು ಇದ್ದರು.