ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಲಾಯರ್ ಜಗದೀಶ್ ಹಾಗೂ ಯುವಕರ ಗುಂಪಿನ ನಡುವೆ ಮಾರಾಮಾರಿ ನಡೆದಿದೆ.
ಅಣ್ಣಮ್ಮ ಕೂರಿಸುವ ವಿಚಾರಕ್ಕೆ ಬೆಂಗಳೂರಿನ ಸಹಕಾರ ನಗರದಲ್ಲಿ ನಡೆದಿರೋ ಘಟನೆ ಇಂದು ಬೆಳಗ್ಗೆ ಜರುಗಿದೆ. ಅಣ್ಣಮ್ಮ ಕೂರಿಸಲು ವಕೀಲ ಜಗದೀಶ್ ವಿರೋಧ ಮಾಡಿದ್ದರು. ಈ ವೇಳೆ ಯುವಕರ ಗುಂಪು ಮನೆ ಬಳಿ ಬಂದಿದೆ. ಇಬ್ಬರ ನಡುವೆ ಮಾರಾಮಾರಿ ಆಗಿದೆ.
ಕೊಡಗೇಹಳ್ಳಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.