ಬೆಂಗಳೂರು: ಕಾಟಾಚಾರಕ್ಕೆ ಕಾನೂನು ಮಾಡಿದ್ರೆ ಇಂತಹ ಕಿರುಕುಳ ಪ್ರಕರಣ ನಿಲ್ಲುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಿರುಕುಳ ನೀಡಿದವರಿಗೆ 3 ವರ್ಷ ಶಿಕ್ಷೆ ಇತ್ತು. ಈಗ ಅದನ್ನು 10 ವರ್ಷಕ್ಕೆ ಹೆಚ್ಚಳ ಮಾಡಿದ್ದೇವೆ. ದಂಡ ಕೂಡಾ 5 ಲಕ್ಷ ಮಾಡಿದ್ದೇವೆ.
ಕಿರುಕುಳ ಕೊಡೋರಿಗೆ ಕಾನೂನಿನ ಬಿಸಿ ತಟ್ಟಬೇಕು ಎಂದರು. ಕಾಟಾಚಾರಕ್ಕೆ ಕಾನೂನು ಮಾಡಿದ್ರೆ ಇಂತಹ ಕಿರುಕುಳ ಪ್ರಕರಣ ನಿಲ್ಲುವುದಿಲ್ಲ. ಇದಕ್ಕಾಗಿ ಫೈನ್ ಮತ್ತು ಶಿಕ್ಷೆ ಎರಡನ್ನೂ ಜಾಸ್ತಿ ಮಾಡಿದ್ದೇವೆ.
Tulsi Plant: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತಾಗುತ್ತೆ? ಇಲ್ಲಿದೆ ಮಾಹಿತಿ
ಇಂತಹ ಕಠಿಣ ಕಾನೂನಿಂದ ಕಿರುಕುಳ ನಿಲ್ಲುತ್ತದೆ. ಆ ಉದ್ದೇಶದಿಂದ ಶಿಕ್ಷೆ ಪ್ರಮಾಣ ಜಾಸ್ತಿ ಮಾಡಿದ್ದೇವೆ. ರಾಜ್ಯಪಾಲರಿಗೆ ಬಿಲ್ ಕಳಿಸಿದ್ದೇವೆ. ಇವತ್ತು ಆಗುತ್ತಾ ಗೊತ್ತಿಲ್ಲ. ರಾಜ್ಯಪಾಲರು ಊರಿಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಅವರು ಬಂದು ನೋಡಿ ಸಹಿ ಮಾಡಿದ ಕೂಡಲೇ ಸುಗ್ರೀವಾಜ್ಞೆ ಜಾರಿ ಆಗಲಿದೆ ಎಂದು ಹೇಳಿದರು.