ಮಹದೇವಪುರ :– ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಕೈಯಲ್ಲಿ ಲಾಂಗ್ ಹಿಡಿದು ನಡು ರಸ್ತೆಯಲ್ಲೇ ಮಹಿಳೆಗೆ ಅವಾಜ್ ಹಾಕಲಾಗಿದೆ.
ಮಹದೇವಪುರದ ಪಣತ್ತೂರು ದಿನ್ನೆಯಲ್ಲಿ ರೌಡಿಶೀಟರ್ ಮುತ್ತುನ ಅಟ್ಟಹಾಸ ಮೆರೆದಿದ್ದು, ರೌಡಿ ಮುತ್ತು ಪ್ರತಿನಿತ್ಯ ಕುಡಿದು ಅಕ್ಕಪಕ್ಕದ ಮನೆಗಳಲ್ಲಿನ ಜನರಿಗೆ ಹಿಂಸೆ ನೀಡುತ್ತಿದ್ದ. ಮದ್ಯಾಹ್ನವೇ ಇಸ್ಪೀಟ್ ಮತ್ತು ಗಾಂಜಾ ಸೇವಿಸಿ ನೆರೆಹೊರೆ ಜನರಿಗೆ ಕಿರುಕುಳ ನೀಡುತ್ತಿದ್ದ. ಪ್ರಶ್ನಿಸಿದಕ್ಕೆ ಎದುರು ಮನೆ ಮಹಿಳೆಗೆ ಅವಾಜ್ ಹಾಕಿದ್ದಾನೆ.
ಲಾಂಗ್ ಹಿಡಿದು ಮಹಿಳೆಗೆ ಅವಾಜ್ ಹಾಕುತ್ತಿರುವ ವಿಡೀಯೋ ವೈರಲ್ ಆಗಿದ್ದು, ವಿಡೀಯೋ ವೈರಲ್ ಆದ್ರೂ ಕಂಡು ಕಾಣದಂತೆ ವರ್ತೂರು ಪೊಲೀಸರು ವರ್ತಿಸುತ್ತಿದ್ದಾರೆ. ಅಲ್ಲದೇ ವರ್ತೂರು ಪೊಲೀಸರು ರೌಡಿಶೀಟರ್ ಮುತ್ತುಗೆ ಹೆದರುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ.