ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ ಕೊಂಚ ಏರಿಕೆ ಕಂಡಿದೆ. ಇತ್ತೀಚೆಗಷ್ಟೇ 57 ಸಾವಿರ ರೂ. ಗಡಿ ದಾಟಿದ್ದ ಅಡಿಕೆ ಧಾರಣೆ ಇದೀಗ ಕೊಂಚ ಕುಸಿತ ಕಂಡಿದೆ. ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿದೆ. ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸವಿದೆ.
ಅಡಿಕೆ ಬೆಲೆ ಸದ್ಯ ಏರಿಳಿತ ಕಾಣುತ್ತಿದೆ, ಕೆಲವು ದಿನಗಳ ಹಿಂದೆ ಕುಸಿತ ಕಂಡಿದ್ದ ಅಡಿಕೆ ಬೆಲೆ ಸದ್ಯ ನಿಧಾನವಾಗಿ ಹೆಚ್ಚಾಗುತ್ತಿದೆ. ಅಡಿಕೆ ಬೆಲೆ ತೀವ್ರವಾಗಿ ಕುಸಿತ ಕಾಣುತ್ತದೆ ಎಂದು ಕಂಗಾಲಾಗಿದ್ದ ರೈತರಿಗೆ ಸದ್ಯ ಬೆಲೆ ಹೆಚ್ಚಳವಾಗುತ್ತಿರುವುದು ಅಲ್ಪ ಸಮಾಧಾನ ಕೊಟ್ಟಿದೆ.
ರೈತರಿಗೆ ಗುಡ್ ನ್ಯೂಸ್ : ಕಂದಾಯ ಇಲಾಖೆಯಿಂದ ಸಿಗುತ್ತಿದೆ ಹೊಸ ಯೋಜನೆ
ಗುರುವಾರ ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಅಡಿಕೆ ಬೆಲೆ ಕನಿಷ್ಠ 48,139 ರೂಪಾಯಿ ಇದ್ದರೆ ಗರಿಷ್ಠ ಬೆಲೆ 49,059 ರೂಪಾಯಿ ಆಗಿದ್ದು 50,000 ರೂಪಾಯಿ ದಾಟುವ ನಿರೀಕ್ಷೆಯಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 35,299 ರೂಪಾಯಿ ಇದ್ದರೆ ಗರಿಷ್ಠ 48,509 ರೂಪಾಯಿಗೆ ಮಾರಾಟವಾಗಿದೆ.
ತೆಂಗು ಬೆಳೆಗೆ ಹಲವು ರೋಗಗಳು, ನೀರಾವರಿ ಕೊರತೆ ನಡುವೆಯೂ ರೈತರು ತೆಂಗಿನ ತೋಟಗಳನ್ನು ಕಾಪಾಡಿಕೊಂಡಿದ್ದರು. ಆದರೆ ಕೊಬ್ಬರಿಗೆ ಸೂಕ್ತ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುವ ಆತಂಕವಿತ್ತು. ಆದರೆ ಕೆಲವು ದಿನಗಳಿಂದ ಕೊಬ್ಬರಿ ಬೆಲೆ ಏಕಾಏಕಿ ಏರಿಕೆಯಾಗುತ್ತಿದೆ.
ಗುರುವಾರ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಕನಿಷ್ಠ 16,500 ರೂಪಾಯಿ ಇದ್ದರೆ, ಗರಿಷ್ಠ 18,000 ರೂಪಾಯಿಗೆ ಮಾರಾಟವಾಗಿದ್ದು ಈ ವರ್ಷದಲ್ಲಿ ಮತ್ತೊಂದು ದಾಖಲೆ ಮಾಡಿದೆ.
ಹುಳಿಯಾರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕನಿಷ್ಠ 15,950 ರೂಪಾಯಿ ಇದ್ದರೆ ಗರಿಷ್ಠ 16,200 ರೂಪಾಯಿಗೆ ಏರಿಕೆಯಾಗಿದೆ.
ಕೊಬ್ಬರಿ ಮಾತ್ರವಲ್ಲದೆ ಎಳನೀರು ಮತ್ತು ತೆಂಗಿನ ಕಾಯಿಗೂ ಬಂಪರ್ ಬೆಲೆ ಬಂದಿದೆ. ಸದ್ಯ ಎಳನೀರು ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ 45-55 ರೂಪಾಯಿಗಳಷ್ಟಿದೆ. ತೆಂಗಿನ ಕಾಯಿ ಬೆಲೆ ಕೂಡ ದಿನೇ ದಿನೇ ಏರಿಕೆಯಾಗುತ್ತಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ 25-30 ರೂಪಾಯಿಯಂತೆ ಮಾರಾಟವಾಗುತ್ತಿದೆ.