ರಾಂಚಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕನನ್ನು ಜಾರಿ ನಿರ್ದೇಶನಾಲಯ (ಇಡಿ) ಜ.31 ರಂದು ಬಂಧಿಸಿತ್ತು. ನಕಲಿ ದಾಖಲೆ ಸೃಷ್ಟಿಸಿ ರಾಂಚಿಯಲ್ಲಿ ಕೋಟ್ಯಂತರ ಮೌಲ್ಯದ 8.86 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆ ಹೊಂದಲಾಗಿತ್ತು ಎಂದು ಇಡಿ ಆರೋಪಿಸಿದೆ.
ʼʼಚೆಂಡು ಹೂʼʼ ಪೂಜೆಗಷ್ಟೇ ಅಲ್ಲ, ನಿಮ್ಮ ಮುಖದ ಸೌಂದರ್ಯಕ್ಕೂ ಉಪಯೋಗ..! ಹೇಗೆ ಗೊತ್ತಾ..?
ಕಳೆದ ತಿಂಗಳು ಎರಡು ಬಾರಿ ಹಿನ್ನಡೆಯ ನಂತರ ಇಂದು ಜಾಮೀನು ಆದೇಶ ಬಂದಿದೆ. ಮೊದಲಿಗೆ, ರಾಂಚಿ ವಿಶೇಷ ನ್ಯಾಯಾಲಯವು ಸೊರೇನ್ ಜಾಮೀನನ್ನು ನಿರಾಕರಿಸಿತ್ತು. ಪ್ರಕರಣ ಸಂಬಂಧ ಇಡಿ ವಿಚಾರಣೆ ಎದುರಿಸಿದ್ದ ಹೇಮಂತ್ ಸೊರೇನ್ ಜನವರಿ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರನ್ನು ಬಂಧಿಸಲಾಯಿತು.