ತುಮಕೂರು:- ಸರ್ಕಾರಿ ಶಾಲಾ ಶಿಕ್ಷಕನೋರ್ವ ಗುಂಡಾಗಿರಿ ತೋರಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದ ತಾಲೂಕು ಕಚೇರಿಯ ಆವರಣದಲ್ಲಿ ಜರುಗಿದೆ.
ಜಮೀನು ವಿಚಾರದಲ್ಲಿ ವಿರುದ್ದ ತೀರ್ಪು ಬಂದ ಹಿನ್ನೆಲೆ ಸರ್ಕಾರಿ ಶಾಲೆ ಶಿಕ್ಷಕ ಮಂಜಪ್ಪ ಹಾಗೂ ರಾಕೇಶ್,ಉದಯ್ ನಡುವೆ ಗಲಾಟೆ ನಡೆದಿದೆ. ಜಮೀನು ವ್ಯಾಜ್ಯ ಸಂಬಂಧ ಎಸಿ ಕೋರ್ಟ್ ಗೆ ಬಂದಿದ್ದಾಗ ಹಲ್ಲೆ ನಡೆದಿದೆ. ಶಾಲಾ ಶಿಕ್ಷಕ ಮಂಜಪ್ಪರಿಂದ ಎದುರಾಳಿ ಜಮೀನಿನ ರಾಕೇಶ್ ಹಾಗೂ ಉದಯ್ ಎಂಬಾತನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ.
ಮಂಜಪ್ಪ ಸರ್ಕಾರಿ ಉರ್ದು ಶಾಲೆ ಶಿಕ್ಷಕರಾಗಿದ್ದ. ಇಂದು ಜಮೀನು ಸಂಬಂದ ಎಸಿ ಕೋರ್ಟ್ ನಲ್ಲಿ ವಿಚಾರಣೆ ಇತ್ತು. ಆದರೆ ತೀರ್ಪು ತಮ್ಮ ವಿರುದ್ಧ ಬಂದ ಹಿನ್ನೆಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಹಲ್ಲೆ ಮಾಡುವ ವಿಡಿಯೋ ವೈರಲ್ ಆಗಿದ್ದು, ತಿಪಟೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.