ಹಾಸನ : ಮಾಟ ಮಂತ್ರದಿಂದ ಮಗನನ್ನ ಸಾಯಿಸಿದ್ದಾರೆಂದು ಆರೋಪಿಸಿ, ದಂಪತಿಯ ಮೇಲೆ ಹಲ್ಲೆ ಮಾಡಿ, ಬಲವಂತವಾಗಿ ವಿಷ ಕುಡಿಸಿರುವ ಘಟನೆ ನಡೆದಿದೆ. ಹಲ್ಲೆ ಹಾಗೂ ವಿಷಪ್ರಾಶಾನದಿಂದ ಅಸ್ವಸ್ಥಗೊಂಡಿದ್ದ ವೃದ್ದೆ ನಂಜಮ್ಮ (65) ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ.
ಏನಿದು ಘಟನೆ..?
ಒಂದು ತಿಂಗಳ ಹಿಂದೆ ನಂಜಮ್ಮ ಸಹೋದರ ಮಂಜೇಗೌಡ ಪುತ್ರ ಸಂಪತ್ ಸಾವು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ತಮ್ಮ ಮಗನ ಸಾವಿಗೆ ನಂಜಮ್ಮಹಾಗೂ ಪತಿ ಶಂಕರೇಗೌಡ ಕಾರಣ ಎಂದು ಆರೋಪಿಸಿ ಹಲ್ಲೆ ನಡೆಸಿದ್ದು, ಇಬ್ಬರಿಗೂ ಬಲವಂತವಾಗಿ ವಿಷ ಕುಡಿಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ಫೆ.2ರಂದು ದಂಪತಿ ಮೇಲೆ ಹಲ್ಲೆ ನಡೆಸಲಾಗಿತ್ತು. ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಂಜಮ್ಮ ಸಾವನ್ನಪ್ಪಿದ್ದಾರೆ. ಈ ಸಂಬಂಧ ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಸ್ತಿ ವಿಚಾರವಾಗಿ ನಂಜಮ್ಮ ಹಾಗೂ ಮಂಜೇಗೌಡ ಕುಟುಂಬದ ನಡುವೆ ಗಲಾಟೆ ನಡೆದಿದೆ. ಇದೇ ವಿಚಾರವಾಗಿ ಎರಡು ಕುಟುಂಬಗಳು ಕಾನೂನು ಹೋರಾಟ ನಡೆಸುತ್ತಿವೆ. ಸದ್ಯ ಗಲಾಟೆ ಸಂಬಂಧ ಮಂಜೇಗೌಡ ಹಾಗೂ ನಂಜಮ್ಮಕುಟುಂಬದಿಂದ ದೂರು ಪ್ರತಿದೂರುಗಳು ಸಹಹ ದಾಖಲಾಗಗಿವೆ. ನಂಜಮ್ಮಗೆ ಮಂಜೇಗೌಡ, ನೀಲಮ್ಮ, ಸಾವಿತ್ರಮ್ಮ, ಮಧುರಿಂದ ವಿಷ ಪ್ರಾಶಾನ ಮಾಡಿಸಿದ್ದಾರೆಂದು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.